ಜಿಲ್ಲೆ

ಪುರುಷರು ರಾಜಕಾರಣ ಮಾಡಲು ಬರಬೇಡಿ! ; ಸ್ತ್ರೀ ಶಕ್ತಿ ಪ್ರಬಲವಾಗಿದೆ ಎಂದ ಶಾಸಕ ಡಾ.ಜಿ.ಪರಮೇಶ್ವರ್

Tumakuru

ಮಧುಗಿರಿ: ಪುರುಷರು ರಾಜಕಾರಣ ಮಾಡಲು ಬರಬೇಡಿ, ಸ್ತ್ರೀ ಶಕ್ತಿ ಪ್ರಬಲವಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು. ಬ್ಯಾಲ್ಯೃ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಗುರುವಾರ ಬ್ಯಾಲ್ಯೃ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರವರ ಹೋಬಳಿಯ ಕೋಡ್ಲಾಪುರ, ಬ್ಯಾಲ್ಯ ,ಕೊಡಗದಾಲ, ಗೊಂದಿಹಳ್ಳಿ ಮತ್ತು ಕೊಂಡವಾಡಿ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದು, ಇನ್ನೂ ಪುರವರ ಜಿಪಂ ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕೆಲವು ತಾಪಂ ಕ್ಷೇತ್ರಗಳು ಮಹಿಳೆಗೆ ಮೀಸಲು ಅಗಿರುವುದರ ಬಗ್ಗೆ ಪ್ರಸ್ತಾಪಿಸಿ ಮಹಿಳೆಯರೇ ಸ್ಟ್ರಾಂಗು. ಅಭಿವೃದ್ಧಿ ವಿಚಾರವಾಗಿ ಗ್ರಾಪಂ ಅಧ್ಯಕ್ಷರು ಮಹಿಳೆಯರಾಗಿದ್ದರೂ ಮುಕ್ತವಾಗಿ ಚರ್ಚಿಸಿ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.

ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಇಡೀ ಪ್ರಪಂಚವೇ ಅವರ ಆಡಳಿತಕ್ಕೆ ಬೆಸ್ತು ಬಿದ್ದಿದ್ದು, ಅಂತಹ ದಿಟ್ಟ ಮಹಿಳೆ ದೇಶವನ್ನು 17 ವರ್ಷಗಳ ಕಾಲ ಮುನ್ನಡೆಸಿರುವಾಗ ಇನ್ನೂ ಗ್ರಾಮ ಪಂಚಾಯಿತಿಗಳನ್ನು ನಿರ್ವಹಿಸುವುದು ಈಗಿನ ಮಹಿಳೆಯರಿಗೆ ಕಷ್ಟವೇನ್ಲ ಎಂದು ಮಹಿಳಾ ಅಧ್ಯಕ್ಷರನ್ನು ರಾಜಕೀಯವಾಗಿ ಪರಮೇಶ್ವರ ಪ್ರೋತ್ಸಾಹಿಸಿದರು.

ಪುರವರದಿಂದ ಬ್ಯಾಲ್ಯೃ ರಸ್ತೆ ಕಾಮಗಾರಿ ತಡವಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ ಪರಮೇಶ್ವರ, ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಿ,ಇ್ಲವಾದರೆ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುವುದಾಗಿ ಗುತ್ತಿಗೆದಾರನಿಗೆ ಎಚ್ಚರಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಮೂವತ್ತು ಸಾವಿರದ ದಿನಸಿ ಕಿಟ್ ವಿತರಿಸಿದ್ದು ಬ್ಯಾಲ್ಯೃ ಗ್ರಾಪಂ ವ್ಯಾಪ್ತಿಯಲ್ಲಿ ಅತಿಹೆಚ್ಚು ಕಡುಬಡವರ ಇರುವುದರಿಂದ ಕಿಟ್‌ಗಳನ್ನು ವಿತರಿಸಲು ತಡವಾಯಿತು. ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಹತ್ತು ವೈದ್ಯರ ತಂಡ ಕಳೆದ ಒಂದೂವರೆ ತಿಂಗಳಿಂದ ಸೋಂಕಿತರ ಮನೆಗಳಿಗೆ ತೆರಳಿ ಆಹಾರ, ಔಷಧ ಕಿಟ್‌ಗಳನ್ನು ನೀಡಿದ್ದಾರೆ ಎಂದು ಪರಮೇಶ್ವರ ಪ್ರಸ್ತಾಪಿಸಿದರು. ಅಲ್ಲದೇ ಗ್ರಾಮದಲ್ಲಿ ವಾಲ್ಮೆಕಿ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿ, ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡುವುದಾಗಿ ತಿಳಿಸಿದರು.

ಗ್ರಾಪಂ ಸದಸ್ಯರಾದ ಶಾರದಮ್ಮ, ಸತ್ಯನಾರಾಯಣ, ಸ್ವಾತಿ , ಎನ್.ಯೋಗೀಶ್, ಮುಖಂಡರಾದ ರಮಾಬಾಯಿ, ಎಪಿಎಂಸಿ ಉಪಾಧ್ಯಕ್ಷ ಕೊಂಡವಾಡಿ ರಾಜ್‌ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಬ್ಯಾಲ್ಯೃ ಸುಮಾ ಪ್ರಕಾಶ್ ಇದ್ದರು.