ತುಮಕೂರು : ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಸಮಾಜದಲ್ಲಿನ್ನೂ ಜಾತಿ ಅಸಮಾನತೆ ದೂರವಾಗಿಲ್ಲ. ಜಾತೀಯತೆಗೆ ಕಾನೂನು ಉತ್ತರವಲ್ಲ. ಜನರ ಮನಸ್ಸಿನಲ್ಲಿ ಬದಲಾವಣೆ ಬರಬೇಕಿದೆ ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಭಾಯಿ ುಲೆ ದಿನಾಚರಣೆ ಹಾಗೂ ಶಿಕ್ಷಕಿಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯನ್ನು ಬುದ್ಧ ಬಯಸಿದರು, ಬಸವಣ್ಣ ಪ್ರತಿಪಾದಿಸಿದರು. ನಂತರ ಬಂದ ಮಹಾತ್ಮಗಾಂಧಿ ಅವರನ್ನು ಒಳಗೊಂಡತೆ ಅನೇಕ ದಾರ್ಶನಿಕರು ಸಮಾಜವನ್ನು ಬದಲಿಸಲು ಪ್ರಯತ್ನಿಸಿದರು. ಇನ್ನೂ ಜಾತಿ ದೂರವಾಗಿಲ್ಲ ಎಂದರು.
ಜ.26 ಗಣತಂತ್ರದ ದಿನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಆಡಳಿತ ವ್ಯವಸ್ಥೆ ಸುಲಭವಾಗಿಸಲು ಪ್ರಜಾಪ್ರಭುತ್ವ ನೀಡಿದ್ದಾರೆ, ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾರ್ಪಾಟು ಮಾಡಿಕೊಂಡಿದ್ದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಸಂವಿಧಾನ ಮಾತ್ರ. ಸ್ವಾತಂತ್ರ್ಯ ನಂತರ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲಿ ಅಂಬೇಡ್ಕರ್ ಒಬ್ಬರು ಎಂದು ಬಣ್ಣಿಸಿದರು.
ಅಸ್ಪೃಶ್ಯರ ಬದುಕಿನಲ್ಲಿ ಬದಲಾವಣೆ ತರುವುದು ಶಿಕ್ಷಣ ಅದಕ್ಕಾಗಿಯೇ ಅಂಬೇಡ್ಕರ್ ಶಿಕ್ಷಣಕ್ಕೆ ಒತ್ತು ನೀಡಿದರು.
ಮಹಿಳೆಯರನ್ನು ಮನೆಯಲ್ಲಿಯೇ ಉಳಿಯಬಾರದು ಎಂದು ಪುರುಷರಿಗೆ ಸಮಾನವಾದ ಅವಕಾಶ ನೀಡಿದರು. ವಿದ್ಯಾವಂತರು ಜೀವನ ಕಟ್ಟಿಕೊಳ್ಳುತ್ತಾರೆ ಅದಕ್ಕಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಸಾವಿತ್ರಿಭಾಯಿ ುಲೆ ಶಾಲೆ ತೆರೆಯಲು ಮುಂದಾದರು. ಅವರು ಆರಂಭಿಸಿದ ಶಿಕ್ಷಣ ಯಜ್ಞದಿಂದ ಮಹಿಳೆಯರ ಶಿಕ್ಷಣ ಪ್ರಮಾಣ ದೇಶದಲ್ಲಿ ಶೇ.70ರಷ್ಟು ತಲುಪಿದೆ. ಅದಕ್ಕೆ ಅಂಬೇಡ್ಕರ್ ಮತ್ತು ಸಾವಿತ್ರಿಭಾಯಿ ಪುಲೆ ಕಾರಣ ಎಂದು ಹೇಳಿದರು.
ದಲಿತರು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಬದಲಾವಣೆ ಸಾಧ್ಯ. ಸರ್ಕಾರಿ ನೌಕರಿಯನ್ನು ಪಡೆಯಬಹುದು. ದಲಿತರಲ್ಲಿ ಬದಲಾವಣೆ ಆಗುತ್ತಿದ್ದು ಇನ್ನಷ್ಟು ಹೆಚ್ಚಬೇಕು. ಸಮಾಜದಲ್ಲಿ ಏನೇ ನೌಕರರಾದರೂ ದಲಿತರು ಎನ್ನುವ ಹಣೆಪಟ್ಟಿ ಕಳಚುತ್ತಿಲ್ಲ. ಇಂತಹ ಪರಿಸ್ಥಿತಿ ದೂರವಾಗುವುದು ಯಾವಾಗ? ಎಸ್ಸಿ, ಎಸ್ಟಿ ನೌಕರರು ಇನ್ನು ಬಲಿಷ್ಠವಾದ ಸಂಘಟನೆಯನ್ನು ಕಟ್ಟಬೇಕಿದೆ. ಕಾನೂನು ತೊಡಕಿನಿಂದ 13 ಮಂದಿ ಹಿಂಬಡ್ತಿ ಅನುಭವಿಸಿ ಆತ್ಮಹತ್ಯೆಗೆ ಶರಣಾದರೂ, 1.5 ಲಕ್ಷ ಸರ್ಕಾರಿ ನೌಕರರು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಪರಮೇಶ್ವರ್ ತಿಳಿಸಿದರು.
ಮರು ಅನಾವರಣದ ಸ್ಥಿರಿ : ಮಿಥ್ಯೆ- ಅಮಿಥ್ಯೆಯಲ್ಲಿ ಹೆಣ್ಣು ಬಂಧಿಯಾಗಿದ್ದಾಳೆ. ದೇವತೆ, ದೆವ್ವದ ಹೆಸರಿನಲ್ಲಿಯೇ ಕಂಡುಕೊಂಡು ಹೆಣ್ಣನ್ನು ಯಾರು ಅರಿತಿಲ್ಲ ಎನ್ನುವುದು ವಚನಗಾರ್ತಿ ನೀಲಮ್ಮನ ವಚನಗಳು ಸ್ಪಷ್ಟವಾಗಿಸಿವೆ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾರಾಣಿ ಹೇಳಿದರು. ವೈದಿಕ ಧರ್ಮದಲ್ಲಿರುವ ಠಕ್ಕತನದಿಂದಲೇ ಸಾವಿತ್ರಿಭಾಯಿ ುಲೆ ಹಿನ್ನೆಲೆಗೆ ಸರಿಯಬೇಕಾಯಿತು. ಅವರನ್ನು ಮರು ಅನಾವರಣ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್, ಗೌರವಾಧ್ಯಕ್ಷ ವೈ.ಟಿ.ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣಪ್ಪ, ನರಸೀಯಪ್ಪ, ನರಸಿಂಹಮೂರ್ತಿ ಉಪಸ್ಥಿತರಿದ್ದರು.