ಜಿಲ್ಲೆ

ಪ್ರಕಾಶ ಸತ್ತಗಿಹಳ್ಳಿಗೆ ಮುಖ್ಯಮಂತ್ರಿ ಪದಕ

Haveri - Desk - Ganapati Bhat

ರಟ್ಟಿಹಳ್ಳಿ: ತಾಲೂಕಿನ ಶಿರಗಂಬಿ ಗ್ರಾಮದ ಪೊಲೀಸ್ ಕಾನ್‌ಸ್ಟೆಬಲ್ ಪ್ರಕಾಶ ಶಿವಾನಂದಪ್ಪ ಸತ್ತಗಿಹಳ್ಳಿ ಅವರಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.

ಪ್ರಕಾಶ ಸತ್ತಗಿಹಳ್ಳಿ ಅವರು 2014ರಲ್ಲಿ ರಿಸರ್ವ್ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಪರೀಕ್ಷೆ ಬರೆದು 2017ರಲ್ಲಿ ಮಂಗಳೂರು ನಗರ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಪ್ರಸ್ತುತ ಮಂಗಳೂರಿನಲ್ಲಿ ನಗರ ಅಪರಾಧ ವಿಭಾಗದಲ್ಲಿ (ಸಿಸಿಬಿ)ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಿರಗಂಬಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಹಿರೇಕೆರೂರು ಸಿ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಎ ಪದವಿ ಶಿಕ್ಷಣ ಪಡೆದಿದ್ದಾರೆ. ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗುವ ಮೂಲಕ ಹಾವೇರಿ ಜಿಲ್ಲೆಗೆ ಕೀರ್ತಿ ತಂದಿರುವ ಪ್ರಕಾಶ ಸತ್ತಗಿಹಳ್ಳಿ ಅವರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.