ಬೆಳಗಾವಿ: ನಮ್ಮ ದೇಶದ ಏಳಿಗೆಗೆ ತ್ಯಾಗ, ಬಲಿದಾನ ಮಾಡಿರುವ ರೈತರನ್ನು ಸರ್ಕಾರಗಳು ಮರೆತಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತ ಮುಖಂಡ ಪ್ರಕಾಶ ನಾಯಕ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ರೈತ ಸಂಘದವರು ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರಾದ ರೈತರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜಗತ್ತಿಗೆ ಅನ್ನ ನೀಡುವ ರೈತರಿಗೆ ಸರ್ಕಾರ ನಿಷ್ಕಾಳಜಿ ವಹಿಸುತ್ತಿದೆ. ರೈತ ದಿನಾಚರಣೆಯನ್ನೇ ಸರ್ಕಾರ ಮರೆತಿದೆ ಎಂದರು. ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರವೀಂದ್ರ ಸುಪ್ಪಣ್ಣವರ, ಕಿಶನ್ ನಂದಿ, ಈರಯ್ಯ ಹಿರೇಮಠ, ಈರಪ್ಪ ಗುಡಾಜಿ, ಈರಶಾದ ನೇಸರಗಿ ಇತರರಿದ್ದರು.