ಸಂಡೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ 140 ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದೆ ಎಂದು ಸಂಸ್ಥೆ ಪ್ರಮುಖ ಸುದೇಶ್ ದಿದಿಜೀ ಹೇಳಿದರು.
ಪಟ್ಟಣದ ಯಶವಂತ್ ವಿಹಾರ ಮೈದಾನದಲ್ಲಿ ಶಿವಧ್ಯಾನ ಮಂದಿರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಆಧ್ಯಾತ್ಮಿಕ, ನೈತಿಕ ಶಿಕ್ಷಣ ಕೊಡಲು 2025-26ನೇ ಸಾಲಿನಲ್ಲಿ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಮಾಡುವ ಮೂಲಕ ವಿಶ್ವಶಾಂತಿಗಾಗಿ ಶ್ರಮಿಸಲಾಗುತ್ತಿದೆ. ಜ್ಞಾನ, ಶಾಂತಿ, ಸಚ್ಚಿದಾನಂದ, ನೆಮ್ಮದಿ, ಸಂಸ್ಕಾರಗಳನ್ನು ಗುರುಗಳಿಂದ, ತಂದೆ, ತಾಯಿ, ಹಿರಿಯರಿಂದ ಪಡೆದುಕೊಳ್ಳಬೇಕು ಎಂದರು.
ಜೆಎಸ್‌ಡಬ್ಲುೃ ಉಪಾಧ್ಯಕ್ಷ ಸುನೀಲ್ ರಾವ್ಫ್ ಮಾತನಾಡಿ, ಎಲ್ಲರೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಒಬ್ಬರನೊಬ್ಬರು ಗೌರವಿಸಬೇಕು. ಯಾರೂ ದೊಡ್ಡವರಲ್ಲ. ಚಿಕ್ಕವರಲ್ಲ. ಎಲ್ಲರೂ ಸಮಾನರೇ ಎಂಬುದನ್ನು ಅರಿತುಕೊಳ್ಳಬೇ. ಆಗ ಸುಂದರವಾದ ಸಮಾಜ ಕಟ್ಟಲು ಸಾದ್ಯ ಎಂದರು.
ಗುರೂಜಿ ಬಸವರಾಜ ಮಾತನಾಡಿ, ಸತ್ಯ ಸಂದೇಶ ಸಾರುವುದು ಈ ಸಂಸ್ಥೆಯ ಉದ್ದೇಶ. ಜ್ಯೋರ್ತಿಲಿಂಗ ಸ್ವರೂಪನಾದ ಪರಮಾತ್ಮನಿಂದ ಮೌಲ್ಯೀಕ ಶಿಕ್ಷಣ ನೀಡಲಾಗುತ್ತಿದೆ. ಸಮಾಜದಲ್ಲಿ ಅತೃಪ್ತಿ, ಅಶಾಂತಿ, ಅರಾಜಕತೆಯನ್ನು ಕೊನೆಗಾಣಿಸಬೇಕಿದೆ. ಅದಕ್ಕಾಗಿ ಶಾಂತಿ, ಪ್ರೀತಿ ಮೂಡಿಸಲಾಗುತ್ತಿದೆ ಎಂದರು. ವಿರಕ್ತಮಠದ ಪ್ರಭುಸ್ವಾಮೀಜಿ, ವೀಣಾಜಿ ಮಾತನಾಡಿದರು.
ಪ್ರಮುಖರಾದ ಡಾ.ಕಿರಣ್, ಜ್ಯೋತಿ ಗುಡೇಕೋಟೆ ನಾಗರಾಜ್, ಶ್ರೀಶೈಲೇಸ್ವರದ ಚಿದಂಬರ ನಾನಾವಟೆ, ಚಂದ್ರಕಲಾಜಿ, ಕೆ.ಎಚ್.ಶಂಕರ್, ನಾಗವೇಣಿ, ಶೀಲಾಜಿ, ನಿರ್ಮಲಾಜಿ ಇದ್ದರು.