ಜಿಲ್ಲೆ

ಜಿಲ್ಲಾಧ್ಯಕ್ಷರಾಗಿ ಪ್ರದೀಪಗೌಡ ಪಾಟೀಲ ಅಧಿಕಾರ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರದೀಪಗೌಡ ಪಾಟೀಲ ಹಾಗೂ ಪದಾಧಿಕಾರಿಗಳು ಮಂಗಳವಾರ ಅಽಕಾರ ವಹಿಸಿಕೊಂಡರು.

ಕಳೆದ ವರ್ಷ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿತ್ತು. ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ನಿಕಟಪೂರ್ವ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪ0ಧಿಸಿದ್ದ ಗುರುರಾಜ ಹುಣಸಿಮರದ ನ್ಯಾಯಾಲಯ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೆ ಕೇಂದ್ರ ಸಮಿತಿಯು, ಅಡಹಾಕ್ (ಉಸ್ತುವಾರಿ) ಅಧ್ಯಕ್ಷರನ್ನಾಗಿ ದಾನಿ ಸದಸ್ಯ ರಾಜೇಂದ್ರ ಎಸ್. ಕಪಲಿ ಹಾಗೂ ಸಂಯೋಜಕರನ್ನಾಗಿ ನಾಗರಾಜ ಎಲಿಗಾರ ಅವರನ್ನು ನೇಮಕ ಮಾಡಿತ್ತು.

ಜಿಲ್ಲಾ ನ್ಯಾಯಾಲಯವು ಚುನಾಯಿತ ಘಟಕಕ್ಕೆ ಅಧಿಕಾರ ಸ್ವೀಕರಿಸಲು ಮಾ. 1ರಂದು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ರಾಜೇಂದ್ರ ಕಪಲಿ ಅವರು ಪ್ರದೀಪಗೌಡ ಪಾಟೀಲ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನವಾಗಿ ಚುನಾಯಿತರಿಗೆ ಸಮಾಜದ ಹಿರಿಯರು, ಮುಖಂಡರು ಸನ್ಮಾನಿಸಿ ಶುಭ ಕೋರಿದರು.