ಗ್ರಾಮೀಣ ಮಟ್ಟದ ಕಾಳಜಿ ಹಾಗೂ ೯/೧೧ ಗೊಂದಲವನ್ನು ಸರ್ಕಾರದ ಗಮನಕ್ಕೆ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ತರುವ ಕಾರ್ಯ ಮಾಡಿದ್ದು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ಗುರುವಾರ ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ ೧೯೦೩೩/೨೦೨೩ರ ವಿಚಾರಣೆ ನಡೆಸಿ ೨೦೨೩ರ ನ.೧೫ ರಂದು ನಗರಾಭಿವೃದ್ಧಿ ಪ್ರಾಽಕಾರದ ಮೂಲಕವೇ ಏಕನಿವೇಶನ ಪರವಾನಗಿ ಪಡೆಯಬೇಕೆಂಬ ಆದೇಶ ಹೊರಡಿಸಿತ್ತು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ರಾಜೀವ್‌ಗಾಂಽ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾದ್ಯಕ್ಷ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ ನೇತೃತ್ವದ ತಂಡ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಮನವಿ ನೀಡಿತ್ತು.
ಏಕನಿವೇಶನ ನಕ್ಷೆಯನ್ನು ದೃಢೀಕರಣ ಮಾಡಲು ಪಿಡಿಒಗಳಿಗೆ ತರಬೇತಿ ನೀಡುವ ಕುರಿತು, ಜಿಪಂ ಇಂಜಿನಿಯರಿಂಗ್ ವಿಭಾಗದ ಅಭಿಯಂತಗೆ ಅಽಕಾರ ನೀಡುವ ಕುರಿತು ಹಾಗೂ ತಾಲೂಕು ನಗರಾಭಿವೃದ್ಧಿ ಪ್ರಾಽಕಾರದ ಮೂಲಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಲಹೆಯನ್ನು ರಾಜೀವ್‌ಗಾಂಽ ಪಂಚಾಯತ್‌ರಾಜ್ ಸಂಘಟನೆ ನೀಡಿ ಶಾಶ್ವತ ಪರಿಹಾರ ನೀಡುವಂತೆ ಕೇಳಿಕೊಂಡಿತ್ತು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ವಿಧಾನ ಮಂಡಲದ ಅಽವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ವಿಧಾನಸಭೆಯಲ್ಲಿ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಇಲಾಖೆ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಗುರುವಾರ ಸಭಾಧ್ಯಕ್ಷ ಯು.ಟಿ.ಖಾದರ್ ವಿಶೇಷ ಸಭೆ ಕರೆದು ಚರ್ಚೆ ನಡೆಸಿ, ತಾಲೂಕು ನಗರಾಭಿವೃದ್ಧಿ ಪ್ರಾಽಕಾರಕ್ಕೆ ಅಽಕಾರ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪೌರಾಡಳಿತ ಸಚಿವ ರಹೀಂ ಖಾನ್, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ಇಲಾಖಾಽಕಾರಿಗಳು, ಶಾಸಕರು ಉಪಸ್ಥಿತರಿದ್ದರು.