ಜಿಲ್ಲೆ

ಚಿತ್ರದುರ್ಗಕ್ಕೆ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆ

ಚಿತ್ರದುರ್ಗ: ಮುದ್ರಾ ಸೇರಿಂದತೆ ಹಲವು ಯೋಜನೆ ಅರ್ಹ ಫಲಾನುಭವಿಗಳಿಗೆ ಹಲವು ಬ್ಯಾಂಕ್ ಗಳು ಸಾಲ, ಶಿಕ್ಷಣ ಸಾಲ‌ ಇತ್ಯಾದಿ ಆರ್ಥಿಕ ನೆರವು ಕೊಡದಿರುವ ಕುರಿತು ದೂರುಗಳಿವೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅಸಮಾಧಾನ ವ್ಯಕ್ತಪಡಿಸಿದರು.

ಡಿಸ ಕಚೇರಿಯಲ್ಲಿ ಇಂದು ಪ್ರಧಾನ ಮಂತ್ರಿ 15 ಅಂಶಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅನೇಕ ಬ್ಯಾಂಕ್ ಮ್ಯಾನೇಜರ್ ಗಳು ಇಂತಹ ಸಾಲ ಯೋಜನೆ ಇಲ್ಲ ಎನ್ನುತ್ತಾರೆ ಎಂದು ಬೇಸರಿದರು. ಸಭೆಯಲ್ಲಿದ್ದ ಅಲ್ಪಸಂಖ್ಯಾತ ರ ಅಭಿವೃದ್ಧಿ ಸಮಿತಿ ಸದಸ್ಯರು ವಿನಾ ಕಾರಣ ಫಲಾನುಭವಿಗಳನ್ನು ಅಲೆದಾಡಿಸುಲಾಗುತ್ತಿದೆ.

ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರು ಕಳೆದ ಇಪ್ಪತ್ತು ದಿನಗಳಿಂದ ಕಚೇರಿಯಲ್ಲಿ ಇಲ್ಲವೆಂದರು. ಡಿಸಿ ಆರ್.ವಿನೋತ್ ಪ್ರಿಯಾ ನಿರ್ದಿಷ್ಟ ಪ್ರಕರಣ ಕುರಿತು ಮಾಹಿತಿ ಕೊಡಿ ಎಂದರು. ಶಿಕ್ಷಣ, ವಸತಿ , ಕೊಳಚೆ ಪ್ರದೇಶ ಅಭಿವೃದ್ಧಿ‌ ಕುರಿತಂತೆ ಚರ್ಚಿಸಲಾಯಿತು. ಚಿತ್ರದುರ್ಗ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಗೆ ಚಿತ್ರದುರ್ಗ ಸಿಎಂಸಿ ಆಯ್ಕೆ ಆಗಿದೆ ಎಂದು ಕುರಿಯನ್ ತಿಳಿಸಿದರು. ಹತ್ತು ಕೋಟಿ ರೂ.ವರೆಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು. ಸಿಇಒ ಸಿ.ಸತ್ಯಭಾಮ ,ಎಸ್ಪಿ ಜಿ.ರಾಧಿಕಾ ಮತ್ತಿತರರು ಇದ್ದರು‌.