ಗಂಡಸಿ: ಲಾಳನಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರದೀಪ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧರಣೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರದೀಪ್‌ಕುಮಾರ್ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ತಾಪಂ ಇಒ ಸತೀಶ್ ಅವರು ಪ್ರದೀಪ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮಾಜಿ ತಾ.ಪಂ. ಸದಸ್ಯ ಪೂರ್ಣಚಂದ್ರ (ಆಗ್ರೋ ಬಾಬು) ಮಾಜಿ ಗ್ರಾ.ಪಂ. ಅಧ್ಯಕ್ಷ ಧರ್ಮಣ್ಣ, ಮುಖಂಡರಾದ ವಾಸುದೇವ್, ಮಂಜೇಗೌಡ, ರಾಜಶೇಖರ್ ನಾಗರಹಳ್ಳಿ, ವೆಂಕಟೇಶ್, ಶ್ರೀನಿವಾಸ್, ಪಿಡಿಒ ಮಲ್ಲೇಗೌಡ, ಸದಸ್ಯರು, ಸಿಬ್ಬಂದಿ ಇದ್ದರು.