ಜಿಲ್ಲೆ

ಏಕಾಗೃತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಏಕಾಗೃತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ. ಪುನಃ, ಪುನಃ ಓದುವುದು ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ನರಗುಂದದ ಬನಹಟ್ಟಿಯ ಕರ್ನಾಟಕ ಪಬ್ಲಿಕ್​ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಅಧ್ಯಯನದಲ್ಲಿ ಏಕಾಗೃತೆ ಸಾಧಿಸುವುದು ಹೇಗೆ? ಕುರಿತು ಉಪನ್ಯಾಸ ನೀಡಿದರು.

ಶ್ರದ್ಧೆಯಿಂದ, ಉತ್ಸಾಹದಿಂದ ಬುದ್ಧಿ ಉಪಯೋಗಿಸಿ ಅಭ್ಯಾಸ ಮಾಡಬೇಕು. ಸಮಯಕ್ಕೆ ಆದ್ಯತೆ ಕೊಡಬೇಕು. ವಿನಾಕಾರಣ ಸಮಯ ಹಾಳು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಂಯೋಜಕ ವೀರಣ್ಣ ಒಡ್ಡೀನ ಮಾತನಾಡಿ, ಅಧ್ಯಯನ ಒಂದು ವೃತ ಇದ್ದಂತೆ. ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಅಧ್ಯಯನ ಮಾಡಬೇಕು. ಓದಿನ ಜತೆಗೆ ಬೆರವಣಿಗೆಗೂ ಮಹತ್ವ ನೀಡಬೇಕು. ಓದುವಾಗ ಅನ್ಯ ವಿಷಯಗಳು ಮನಸ್ಸನ್ನು ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದರು.

ಡಿಮ್ಹಾನ್ಸ ಮನೋ ಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಆತ್ಮವಿಶ್ವಾಸ, ಛಲ, ಬದ್ಧತೆಯಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

ಬನಹಟ್ಟಿ ಕೆಪಿಎಸ್​ ಪ್ರಾಚಾರ್ಯ ಕೆ.ಎಂ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಪರಮೇಶ, ಕವಿತಾ ಸಿರಿಯಣ್ಣವರ, ಅನ್ನಪೂರ್ಣಾ, ಸಂಗನಗೌಡ ಪಾಟೀಲ, ಎಸ್​.ಎನ್​. ಗಡೇಕಾರ, ಇತರರು ಇದ್ದರು.

ಎಸ್​.ವೈ.ಪಾಟೀಲ ಸ್ವಾಗತಿಸಿದರು. ಗೀತಾ ಪೂಜಾರ ನಿರೂಪಿಸಿದರು. ಸಿ.ಜಿ. ಖಾನಾಪುರ ವಂದಿಸಿದರು.