ಕೊಕ್ಕಡ: ಹಿಂದುತ್ವ, ರಾಷ್ಟ್ರೀಯತೆಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬಿಜೆಪಿಯನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಅವರ ತ್ಯಾಗ, ಪರಿಶ್ರಮ ನೆನಪಿಸಿಕೊಂಡು ಪಕ್ಷವನ್ನು ಸದೃಢಗೊಳಿಸುವ ಕೆಲಸವನ್ನು ಅಭ್ಯಾಸ ವರ್ಗಗಳ ಮೂಲಕ ಮಾಡಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅರಸಿನಮಕ್ಕಿಯಲ್ಲಿ ಹತ್ಯಡ್ಕ ರೆಖ್ಯ ಗ್ರಾಮಗಳ ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿದರು.
ಅಭ್ಯಾಸ ವರ್ಗದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲ್, ಮಂಡಲ ರೈತ ಮೋರ್ಚಾ ಕಾರ್ಯದರ್ಶಿ ಯೋಗೀಶ್ ಆಲಂಬಿಲ, ಅಭಿಜಿತ್ ಜೈನ್ ಮಾಹಿತಿ ನೀಡಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೈೊಲ, ಹತ್ಯಡ್ಕ ಶಕ್ತಿಕೇಂದ್ರ ಪ್ರಮುಖ್ ಜಯಪ್ರಸಾದ್ ಶೆಟ್ಟಿಗಾರ್, ರೆಖ್ಯ ಶಕ್ತಿ ಕೇಂದ್ರ ಪ್ರಮುಖ್ ಚೇತನ್ ಉಪಸ್ಥಿತರಿದ್ದರು. ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ ಸ್ವಾಗತಿಸಿದರು. ವೃಷಾಂಕ್ ಖಾಡಿಲ್ಕರ್ ನಿರೂಪಿಸಿದರು.