ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನ ಉತ್ತಮವಾಗಿ ರೂಪುಗೊಳ್ಳಲು ಜ್ಞಾನ ಅತಿ ಅವಶ್ಯಕ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ನಗರದ ಪವನ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಕಲಾ ಮೇಳವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮೇಳದಲ್ಲಿ ಸುಮಾರು 200ಕ್ಕೂ ಹೆಚ್ಚಿನ ವಿಧದ ವಿಜ್ಞಾನ, ಗಣಿತ ಸಮಾಜ ವಿಜ್ಞಾನ, ಕಲಾ ಮಾದರಿಗಳು, ಪೈಥಾಗೋರಸ್ ಪ್ರಮೇಯ, ಹೀಗೆ ಹಲವು ಪ್ರಾಯೋಗಿಕ ಮಾದರಿಗಳನ್ನು ಪ್ರದರ್ಶಿಸಿದರು.
ಕವಿವಿ ಪ್ರಾಧ್ಯಾಪಕ ಡಾ. ಬಸವರಾಜ ನಾಗೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪವನ ಸಮೂಹ ಸಂಸ್ಥೆ ಕಾರ್ಯದರ್ಶಿ ಮಹೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ಉಪಾಧ್ಯಕ್ಷೆ ರತ್ನ ಪಾಟೀಲ, ಪ್ರಾಂಶುಪಾಲ ವಿಕ್ರಮ ಮಹಾಶಬ್ದೆ, ಮುಖ್ಯ ಸಂಯೋಜಕಿ ಸವಿತಾ ಕಂಬಿ, ಶಿಕ್ಷಕಿಯರಾದ ಸುಜಾತ ಮೊಕಾಶಿ, ಪುಷ್ಪಲತಾ, ಶಾಲಾ ಪ್ರಧಾನಮಂತ್ರಿ ನಿಯಾಜುದ್ದೀನ, ಸಿಬ್ಬಂದಿ, ಇತರರು ಇದ್ದರು. ಸೋನಲ್ ಸ್ವಾಗತಿಸಿದರು. ರಕ್ಷಾ ಹಾಗೂ ತೇಜಸ್ ನಿರೂಪಿಸಿದರು.