ಜಿಲ್ಲೆ

ಪ್ರಾಯೋಗಿಕ ಪಾಠ ಬೋಧನೆ ಅರ್ಥಪೂರ್ಣ

ಗಿರೀಶ ಸಗರ

ವಿಜಯಪುರ:ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಪಾಠ ಬೋಧನೆ ಮಾಡುವುದು ಕಡಿಮೆಗೊಳಿಸಿ ರಚನಾತ್ಮಕತೆ ಮತ್ತು ಪ್ರಾಯೋಗಿಕವಾಗಿ ಹೇಳಿದರೆ ಪಾಠ ಅರ್ಥಪೂರ್ಣವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಪ.ಪೂ. ವಿಭಾಗದ ಮೂಲ ಸೌಕರ್ಯಗಳ ಜಂಟಿ ನಿರ್ದೇಶಕ ಎಸ್​. ಮಹೇಶ ಹೇಳಿದರು.

ನಗರದ ಎಕ್ಸಲಂಟ್​ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಹಾಗೂ ಎಕ್ಸಲಂಟ್​ ಪ.ಪೂ. ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಗಣಿತಶಾಸ, ಜೀವಶಾಸ ಮತ್ತು ಗಣಕ ವಿಜ್ಞಾನ ವಿಷಯಗಳ ಉಪನ್ಯಾಸಕರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಯ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಪರತೆಯ ಜತೆಗೆ ವಿದ್ಯಾರ್ಥಿಗಳ ಮೇಲೆ ಪ್ರೀತಿ ಇದ್ದಾಗಲೇ ಉತ್ತಮ ಉಪನ್ಯಾಸಕರಾಗಲು ಸಾಧ್ಯ ಎಂದರು.

ಅತಿಥಿಯಾದ ರಾಮ ನಗರದ ನಿವೃತ್ತ ಉಪನಿರ್ದೇಶಕ ಗುರುಸಿದ್ಧಯ್ಯ ಮಾತನಾಡಿ, ಕಾರ್ಯಾಗಾರಗಳು ವೃತ್ತಿ ನೈಪುಣ್ಯತೆ ಹೆಚ್ಚಿಸುವುದರ ಮೂಲಕ ಅತ್ಯುತ್ತಮ ಬೋಧಕರಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೆರವಾಗುತ್ತವೆ. ಇಂತಹ ಕಾರ್ಯಾಗಾರಗಳಲ್ಲಿ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ವಿಷಯಾಧಾರಿತ ರುವ ಗೊಂದಲ ನಿವಾರಿಸಿಕೊಂಡಾಗಲೇ ಕಾರ್ಯಾಗಾರದ ಉದ್ದೇಶ ಸಾಕಾರಗೊಳ್ಳುತ್ತದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಪ.ಪೂ. ವಿಭಾಗದ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಮಾತನಾಡಿ, ಅನುಭವ ಹೆಚ್ಚಾದಂತೆ ಅಮೃತದ ಸಿಹಿಯೂ ಕೂಡ ಹೆಚ್ಚಾಗುತ್ತದೆ. ಪ್ರತಿ ಪಾಠದ ಮೇಲೆ ಕಿರು ಪರೀೆ ನಡೆಸಿದಾಗ ಮಗುವಿನ ಸಾಮರ್ಥ್ಯ ಅರಿಯುವುದಕ್ಕೆ ಸಾಧ್ಯ. ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಹೆಚ್ಚಿಸಿ ಯಾವ ವಿದ್ಯಾರ್ಥಿಯೂ ಕೂಡ ಶಾಲೆಗೆ ಗೈರಾಗದಂತೆ ನಿಗಾವಹಿಸಬೇಕು. ಅಲ್ಲದೆ, ಜಿಲ್ಲೆಯ ಪಿಯು ಫಲಿತಾಂಶ ಉನ್ನತಿಕರಣಗೊಳಿಸುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್​.ಆರ್​. ಬೆನಕಟ್ಟಿ, ಆರ್​.ವಿ. ಮುರಗೋಡ, ಆರ್​.ಜಿ. ದರಬಾರ, ಜೆ.ಜಿ. ವಾರಿ, ರಾಜೇಶ್ವರಿ ದೊಡಮನಿ ಉಪಸ್ಥಿತಿ ವಹಿಸಿದ್ದರು.

ಮಮದಾಪುರ ಸರ್ಕಾರಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾಯೆರ್ ಎಸ್​.ಪಿ. ನಾದ, ಸಿಕ್ಯಾಬ್​ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾಯೆರ್ ಕೆ.ಪಿ. ಸಾದತ್​ ಅವರನ್ನು ಸನ್ಮಾನಿಸಲಾಯಿತು. ಚಿನ್ಮಯಿ ಸಂಪಗಾಂವಕರ ಪ್ರಾರ್ಥಿಸಿದರು. ರವಿ ಕಲ್ಲೂರ ಮಠ ಸ್ವಾಗತಿಸಿದರು. ಶರಣಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

ವಿಜಯಪುರದ ಎಕ್ಸಲಂಟ್​ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ವಿಷಯಗಳ ಉಪನ್ಯಾಸಕರಿಗಾಗಿ ಹಮ್ಮಿಕೊಂಡ ಕಾರ್ಯಾಗಾರಕ್ಕೆ ಗಣ್ಯರು ಚಾಲನೆ ನೀಡಿದರು. ಎಸ್​. ಮಹೇಶ, ಡಾ. ಸಿ.ಕೆ. ಹೊಸಮನಿ, ಶ್ರೀಕಾಂತ ಕೆ.ಎಸ್​. ಮತ್ತಿತರರಿದ್ದಾರೆ.