ಕುಡಚಿ ಪಟ್ಟಣದ ಅಜಿತ ಬಾನೆ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಹೊಸ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸಂತೆ ಮೇಳದಲ್ಲಿ ವಿದ್ಯಾರ್ಥಿಗಳು ತರಕಾರಿ ವ್ಯಾಪಾರ ಮಾಡಿದರು. ಹಮಿದೊದ್ದೀನ್ ರೋಹಿಲೆ, ಎಸ್. ಜಿ.ದೊಡಮನಿ, ಎಲ್.ಎಸ್.ಚೌರಿ ಇತರರು ಇದ್ದರು. 
ಜಿಲ್ಲೆ

ವ್ಯಾವಹಾರಿಕ ಜ್ಞಾನವೂ ಮುಖ್ಯ

ಪ್ರಶಾಂತ ಹೂಗಾರ

ಕುಡಚಿ: ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜತೆಗೆ ವ್ಯವಹಾರ ಜ್ಞಾನವೂ ಮುಖ್ಯವಾಗಿರುತ್ತದೆ. ಈ ಎರಡೂ ಜ್ಞಾನಗಳಿದ್ದರೆ ಎಲ್ಲಿ ಬೇಕಾದರೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ಹಮಿದೊದ್ದೀನ್ ರೋಹಿಲೆ ಹೇಳಿದರು.

ಪಟ್ಟಣದ ಅಜಿತ ಬಾನೆ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಹೊಸ ಪ್ರೌಢ ಶಾಲಾ ಮಕ್ಕಳಿಂದ ಶುಕ್ರವಾರ ಆಯೋಜಿಸಿದ್ದ ಸಂತೆ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಪತಹಸೀಲ್ದಾರ್ ಎಸ್. ಜಿ.ದೊಡಮನಿ, ಮುಖ್ಯಶಿಕ್ಷಕ ಎಲ್.ಎಸ್.ಚೌರಿ, ಎಂ.ಎನ್.ದಾಣನವರ, ಅಶೋಕ ಕಾಂಬಳೆ, ಬಾಬಾಲಾಲ ಪಿನ್ನಿತೋಡ, ಎ.ಎಸ್. ಟೊನ್ನೆ, ಸಾಧಿಕ್ ರೋಹಿಲೆ, ಬಾಬಾಜಾನ್ ಕಾಲೇಮುಂಡಾಸ, ಗ್ರಾಮ ಲೆಕ್ಕಾಧಿಕಾರಿ ವೈ.ಕೆ.ಹೇಳವರ ಇತರರು ಇದ್ದರು.

ವಿದ್ಯಾರ್ಥಿಗಳು ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಟೆಂಗಿನ ಕಾಯಿ, ಎಳನೀರು ಸೇರಿ ವಿವಿಧ ವ್ಯಾಪಾರ ಮಾಡಿದರು. ಪಾಲಕರು ತರಕಾರಿಗಳನ್ನು ಖರೀದಿಸಿದರು.