ಮಂಗಳೂರು : ಆಸ್ತಿ, ಸಂಪತ್ತು, ಅಧಿಕಾರ ಇವೆಲ್ಲವುಗಳಿಂದಲೂ ಜ್ಞಾನ ಸಂಪತ್ತೇ ಮಿಗಿಲಾದುದು. ಈ ನೆಲೆಯಲ್ಲಿ ಚತುರ್ವೇದ ಪಂಡಿತ, ಕದ್ರಿ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಪ್ರಭಾಕರ ಅಡಿಗರು ತನ್ನ ಜ್ಞಾನ ಸಂಪತ್ತಿನಿಂದ ಬಹುಮಾನ್ಯತೆಯನ್ನು ಹೊಂದಿರುವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಜರಗಿದ ವಿದ್ಯಾರಂಭ,ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಅಡಿಗ ಅವರಿಗೆ ವಿಜಯ ದಶಮಿ ಗೌರವ ಪ್ರದಾನ ಮಾಡಿ ಅವರು ಮಾತನಾಡಿದರು.
ಗೌರವ ಸ್ವೀಕರಿಸಿದ ಡಾ. ಪ್ರಭಾಕರ ಅಡಿಗ ಮಾತನಾಡಿ ‘ ವೇದಾಧ್ಯಯನದಿಂದ ಮೊದಲ್ಗೊಂಡು ವಿಜ್ಞಾನದವರೆಗಿನ ಪ್ರತಿಯೊಂದು ಜ್ಞಾನವನ್ನು ಯುವ ಪೀಳಿಗೆ ಸಂಪಾದಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು’ ಎಂದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಶುಭ ಹಾರೈಸಿದರು. ಪ್ರೊ.ಜಿ.ಕೆ.ಭಟ್‌ಸೇರಾಜೆ, ಶಿವಪ್ರಸಾದ್ ಪ್ರಭು, ಸುಧಾಕರ ರಾ