ಬೆಳಗಾವಿ :ತಾಲೂಕಿನ ನಾವಗೆ ಗ್ರಾಮದಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದಾರೆ.
ಸೋಮವಾರ ರಾತ್ರಿ ರಾಜಾರೋಷವಾಗಿ ಊರಿಗೆ ನುಗ್ಗಿ ದಾಂದಲೆ ಮಾಡಿದ ಮತ್ತೊಂದು ಗ್ಯಾಂಗ್. ಕೈಯಲ್ಲಿ ಬಂದೂಕು, ತಲ್ವಾರ್, ಮಚ್ಚು ಹಿಡಿದು ಗೂಂಡಾವರ್ತನೆ ತೋರಿದ್ದಲ್ಲದೆ, ನಾಲ್ಕು ಮನೆಗಳ ಮೇಲೆ ಕಲ್ಲು ತೂರಿ, ಕಾರು, ಬೈಕ್ ಜಖಂಗೊಳಿಸಿದ್ದ ದುಷ್ಕರ್ಮಿಗಳು.
ತ್ರಿಕೋನ ಪ್ರೇಮ ಕಹಾನಿಗೆ ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ಬಂದೂಕು, ತಲ್ವಾರ್, ರಾಡ್, ಕಲ್ಲುಗಳಿಂದ ಅಟ್ಯಾಕ್ ಮಾಡಿಗ್ರಾಮದಲ್ಲಿ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಾವಗೆಯಲ್ಲಿ ನಡೆದಿದೆ.
ಮನೆಯ ಮುಂದೆ ನಿಂತಿದ್ದ ಮೂರು ಕಾರು, ಆರು ಬೈಕ್ ಮೇಲೆ ಕಲ್ಲು ತೂರಿ ಅಟ್ಟಹಾಸ ಮೆರಿದ್ದಲ್ಲದೆ, ಮನೆಯ ಮೇಲೆಯೂ ಕಲ್ಲು ತೂರಿದ ದುಷ್ಕರ್ಮಿಗಳು. ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ ಟೈಲ್ಸ್ ಪುಡಿ ಪುಡಿ ಮಾಡಿದ್ದಾರೆ.
ಮನೆ ಒಳಗೂ ನುಗ್ಗಿ ದಾಂಧಲೆ ಮಾಡಿದ ಮುಸುಕುದಾರಿ ದುಷ್ಕರ್ಮಿಗಳ ಗ್ಯಾಂಗ್. ಹೊಸ ವರ್ಷದ ರಾತ್ರಿ ಪ್ರೀತಿ ವಿಚಾರಕ್ಕೆ ಬಾದರವಾಡಿ ಮತ್ತು ನಾವಗೆ ಯುವಕನ ಮಧ್ಯೆ ಮಾರಾಮಾರಿಯಾಗಿದೆ.
ಈ ವೇಳೆ ಮಧ್ಯ ಪ್ರವೇಶ ಮಾಡಿ ಎರಡೇಟು ಕೊಟ್ಟು ಜಗಳ ಬಿಡಿಸಿದ್ದ ಗ್ರಾಮದ ಪಂಚರು.ನಿನ್ನೆ ಊರಿಗೆ ನುಗ್ಗಿದ್ದ ಬಾದರವಾಡಿ ಯುವಕರನ್ನ ನೋಡಿಕೊಳ್ಳುವುದಾಗಿ ಹೇಳಿದ್ದ ನಾವಗೆ ಗ್ರಾಮದ ಯುವಕರು. ಈ ವಿಚಾರ ತಿಳಿದು ಇಂದು ಆ ಯುವಕರ ಮನೆ ಮೇಲೆ ಅಟ್ಯಾಕ್ ಮಾಡಿದ್ರಾ ಬಾದರವಾಡಿ ಯುವಕರ ಗ್ಯಾಂಗ್ ಎನ್ನುವ ಪ್ರಶ್ನೆ ಕಾಡುತ್ತಿದೆ. ಪುಂಡರ ಅಟ್ಟಹಾಸ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.