ಜಿಲ್ಲೆ

ಪ್ರಯಾಸ ಅಡಿಯಲ್ಲಿ 123 ಪಿಪಿಒ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಭವಿಷ್ಯ ನಿಧಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜುಲೈ ಮಾಹೆಯಲ್ಲಿ ನಿವೃತ್ತರಾದ 123 ಜನರಿಗೆ ಪಿಂಚಣಿ ಪಾವತಿ ಆದೇಶ (ಪಿಪಿಒ) ನೀಡಲಾಯಿತು.

ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ದಾಖಲೆಯ ಪಿಪಿಒ ವಿತರಣೆಯಾಗಿದೆ. ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ಪಿಪಿಒ ವಿತರಣೆ ಮಾಡಿದರು.

ಸಹಾಯಕ ಪಿಎಫ್ ಆಯುಕ್ತ ಮಂಜುನಾಥ ಜೆ.ಎ,, ಅಕೌಂಟ್ಸ್ ಆಫೀಸರ್ ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಉಪಸ್ಥಿತರಿದ್ದರು.