ಹುಬ್ಬಳ್ಳಿ: ಇಲ್ಲಿಯ ನವನಗರದ ಇಪಿಎಫ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸೆಪ್ಟೆಂಬರ್ ನಲ್ಲಿ ನಿವೃತ್ತರಾದ 15 ನೌಕರರಿಗೆ ಪ್ರಯಾಸ ಯೋಜನೆ ಅಡಿ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ ಮಾಡಲಾಯಿತು.
ಸಹಾಯಕ ಪಿಎಫ್ ಆಯುಕ್ತ ಅಕ್ಷಯ ವಾಘ್ ಅವರಿಂದ ನೌಕರರು ಪಿಪಿಒ ಪಡೆದುಕೊಂಡರು. ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಹಾಜರಿದ್ದರು.