ಜಿಲ್ಲೆ

ಪಿಂಚಣಿ ಪತ್ರ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಯಾಸ ಕಾರ್ಯಕ್ರಮದಲ್ಲಿ 12 ಜನರಿಗೆ ನಿವೃತ್ತಿ ದಿನವೇ ಪಿಂಚಣಿ ಪತ್ರ ವಿತರಣೆ ಮಾಡಲಾಯಿತು.

ಸಹಾಯಕ ಪಿಎಫ್ ಆಯುಕ್ತ ಬಿಜಯ ಪ್ರಸಾದ, ಅಕೌಂಟ್ಸ್ ಆಫೀಸರ್ ಬಿ. ಫಣಿಸಿನ್ಹಾ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಅಧಿಕಾರಿಗಳು, ಪಿಂಚಣಿದಾರರು ಇದ್ದರು.