ಜಿಲ್ಲೆ

ಪಿಎಫ್ ಕಚೇರಿಯಲ್ಲಿ ಪಿಪಿಒ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಪ್ರಾದೇಶಿಕ ಪಿಎಫ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಿವೃತ್ತಿ ದಿನವೇ ಪಿಂಚಣೆ ಆದೇಶ ಪತ್ರ (ಪಿಪಿಒ) ನೀಡುವ ಪ್ರಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೇ ತಿಂಗಳಲ್ಲಿ ನಿವೃತ್ತರಾದವರಿಗಾಗಿ ನಡೆದ ಕಾರ್ಯಕ್ರಮದಲ್ಲಿ 44 ಜನರಿಗೆ ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ಪಿಪಿಒ ವಿತರಣೆ ಮಾಡಿದರು.

ಸಹಾಯಕ ಪಿಎಫ್ ಆಯುಕ್ತ ಮಂಜುನಾಥ ಜೆ.ಎ, ಅಕೌಂಟ್ಸ್ ಆಫೀಸರ್ ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರವೈಸರ್ ಕೆ. ಯುವರಾಜ, ಸಿಬ್ಬಂದಿ ಇತರರು ಇದ್ದರು.