ಜಿಲ್ಲೆ

77 ನಿವೃತ್ತರಿಗೆ ಪಿಂಚಣಿ ಪತ್ರ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ನಿವೃತ್ತಿ ದಿನವೇ ಪಿಂಚಣಿ ಆದೇಶ ಪತ್ರ ನೀಡುವ ವಿನೂತನ ಪ್ರಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜುಲೈನಲ್ಲಿ ನಿವೃತ್ತರಾದ 77 ಜನರ ಪಿಂಚಣಿ ಪಾವತಿ ಆದೇಶ (ಪಿಪಿಒ) ಪತ್ರಗಳನ್ನು ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ 24 ನಿವೃತ್ತರು ಪಿಪಿಒ ಪಡೆದುಕೊಂಡರು. ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ., ಕೆ. ವೆಂಕಟೇಶ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಉಪಸ್ಥಿತರಿದ್ದರು.