ಜಿಲ್ಲೆ

ಪಿಪಿಒ ವಿತರಣೆಯಲ್ಲಿ ಪಿಎಫ್ ಕಚೇರಿ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ನಿವೃತ್ತಿ ದಿನವೇ ನೌಕರರಿಗೆ ಪಿಂಚಣಿ ಆದೇಶ ಪ್ರತಿಯನ್ನು (ಪಿಪಿಒ) ನೀಡುವ "ಪ್ರಯಾಸ' ಕಾರ್ಯಕ್ರಮವನ್ನು ಇಲ್ಲಿಯ ನವನಗರದ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.

ಏಪ್ರಿಲ್ ತಿಂಗಳಲ್ಲಿ ನಿವೃತ್ತರಾದ ವಿವಿಧ ಕಂಪನಿ, ಉದ್ಯೋಗದಾತ ಸಂಸ್ಥೆಗಳ 34 ಜನರಿಗೆ ಪಿಪಿಒ ನೀಡಲಾಯಿತು. ಇದರಲ್ಲಿ 20 ನಿವೃತ್ತ ನೌಕರರು ಕಾರ್ಯಕ್ರಮಕ್ಕೆ ಹಾಜರಾಗಿ ಪಿಪಿಒ ಪಡೆದುಕೊಂಡರು.

ಈ ತಿಂಗಳ ವಿಶೇಷ ಎಂದರೆ ಹುಬ್ಬಳ್ಳಿ ಕಚೇರಿಗೆ ನೀಡಲಾಗಿದ್ದ 29 ಗುರಿಯನ್ನು ಮೀರಿ 34 ಜನರಿಗೆ ಪಿಪಿಒ ನೀಡಲಾಗಿದೆ. ಇದರಿಂದ ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ, ಸಹಾಯಕ ಪಿಎಫ್ ಆಯುಕ್ತ ಬಿಜಯ ಪ್ರಸಾದ ಅವರು ಪಿಂಚಣಿ ಪತ್ರ ವಿತರಣೆ ಮಾಡಿದರು. ಅಕೌಂಟ್ಸ್ ಆಫೀಸರ್ ಮಂಜುನಾಥ ಎ. ಜಮದಂಡಿ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ ಹಾಗೂ ಸಿಬ್ಬಂದಿ ಹಾಜರಿದ್ದರು.