ಜಿಲ್ಲೆ

ಸಂಗೀತ ಕಾಲೇಜಿನಲ್ಲಿ ಮೊಬೈಲ್ ರೇಡಿಯೇಷನ್ ಕುರಿತು ಜಾಗೃತಿ

Gadag - Shivanand Hiremath

ಗದಗ: ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದ್ದು ವಿದ್ಯಾರ್ಥಿಗಳು   ಮೊಬೈಲನ್ನು ಎಚ್ಚರದಿಂದ ಬಳಸಬೇಕೆಂದು   ಪ್ರಾಚಾರ್ಯ ಡಾ. ಶ್ರೀಮತಿ ಸುಮಿತ್ರಾ ಹಿರೇಮಠ್ ಅವರು ಹೇಳಿದರು.
ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮೊಬೈಲ್ ರೇಡಿಯೇಷನ್ ತರಬೇತಿ  ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ಮೊಬೈಲ್ ರೇಡಿಯೇಷನ್ ಆರೋಗ್ಯಕ್ಕೆ ಹಾನಿಕರವಾದಂತ ಮಾರಕ ರೋಗಗಳನ್ನು ಉಂಟು ಮಾಡುತ್ತಿದ್ದು ವಿದ್ಯಾರ್ಥಿಗಳಾದವರು ಮೊಬೈಲನ್ನು ಹಿತಮಿತವಾಗಿ ಬಳಸಬೇಕು ಎಂದು ಅವರು ಹೇಳಿದರು.

ಸಾವಿತ್ರಿ ನಾಗಠಾಣ, ಎಂ.ಡಿ . ದಿಬ್ಬದಮನಿ, ಎಸ್. ಎಂ. ಹುಗಾರ, ದಸರತ ತಿರ್ಲಾಪುರ್ ಅವರು ಮೊಬೈಲ್ ರೇಡಿಯೇಷನ್ ನಿಂದ ಆಗುವ ದುಷ್ಪರಿಣಾಮವನ್ನು ಪ್ರಾತ್ಯಕ್ಷಿಕೆ ಮುಖಾಂತರ ತಿಳಿ ಹೇಳಿ ತೋರ್ಪಡಿಸಿ ಅವರು ಮಾತನಾಡಿ ಮೊಬೈಲ್ ರೇಡಿಯೇಷನ್ ನಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರುವದರ ಜೊತೆಗೆ ತಲೆನೋವು, ಕಣ್ಣಿನ ದೋಷ, ಕಂಡು ಬರುತ್ತಿದ್ದು,ನಿಸರ್ಗದ ಮೇಲೆ ವ್ಯತರಿಕ್ತ ಪರಿಣಾಮ ಬೀರಿ ಅನೇಕ ವಿಧದ  ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಾದ ರಾಹುಲ್ ರಾಠೋಡ್ ,   ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ, ವಿ ಎಂ ಪಟ್ಟದಕಲ್,  ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ್, ಕೃತಿ ಸುಲಾಕೆ, ಸಂಗೀತ ಡಿ ಎಂ, ಸುಮತಿ ಮುರುಗೋಡ್, ರಾಹುಲ್ ರಾಠೋಡ್, ಅನಗ ಕುಲಕರ್ಣಿ, ಯಶೋಧ ಮಾದರ್, ಸಂಜೆ ಅಕ್ಕಸಾಲಿ, ಪಾಲ್ಗೊಂಡಿದ್ದರು.