ಗದಗ: ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ದೇಶವಿದೇಶವನ್ನು ಸುತ್ತಿ ಓದಿ ಜ್ಞಾನ ಸಂಪಾದಿಸಿ ಮಹಾಮೇದಾವಿಗಳಾಗಿದ್ದರು ವಿದ್ಯಾರ್ಥಿಗಳಾದವರು ಓದಿನ ರೂಢಿಯನ್ನು ಬೆಳೆಸಿಕೊಳ್ಳಬೇಕೆಂದು ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ ಅವರು ಹೇಳಿದರು.
ಡಾ ಪಿ ಜಿ ಎ ಎಸ ಸಮಿತಿಯ
ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉದ್ದೇಶಿಸಿ ಅವರು ಮಾತನಾಡುತ್ತಾ ಸಮಾನತೆಗಾಗಿ ಹೋರಾಡಿದಂತ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಉಪನ್ಯಾಸಕರಾದ ಎನ್ ಎಂ ಶೇಕ್ ಅವರು ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರು ಅಸ್ಪೃಶ್ಯತಿಯನ್ನು ಹೋಗಲಾಡಿಸಲು ಜೀವನದ ಉದ್ದಕ್ಕೂ ಹೋರಾಟವನ್ನು ಮಾಡಿ ಕೊನೆಗೆ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು ಡಿಸೆಂಬರ್ 6 ರನ್ನು ಅವರ ಮಹಾಪರಿ ನಿರ್ವಣಾ ದಿನವೆಂದು ದೇಶದುದ್ದಕ್ಕೂ ಆಚರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಉಪನ್ಯಾಸಕ ಗಂಗಾಧರ ಹಿಡಿಕಿಮಠ ಮಾತನಾಡಿ ಕುಂತರೆ ಶೋಷಣೆ ತಪ್ಪದು ಎದ್ದು ನಿಂತರೆ ಗೆಲುವು ನಮ್ಮದೇ ಎಂಬ ವಿಚಾರಧಾರೆಗಳನ್ನು ಡಾ ಬಿ ಆರ್ ಅಂಬೇಡ್ಕರ್ ಅವರ ಸಂದೇಶ ವಾಕ್ಯವನ್ನು ನೋಡಿದಾಗ ನಮಗೆ ತಿಳಿಯುತ್ತದೆ ಎಂದ ಅವರು ಶೋಷಣೆ ವಿರುದ್ಧ ಧ್ವನಿ ಎತ್ತುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು.
ಡಾ ಎಸ್ ಎಸ್ ಗಡ್ಡಮಠ ಅವರ ಮಾತನಾಡಿ ಉತ್ತಮ ದಾರವಾಹಿಗಳನ್ನು ನೋಡುವುದರಿಂದ ಮನ ಪರಿವರ್ತನೆ ಯಾಗುತ್ತಿದ್ದು ಸಾಧಕರ ಯಶೋಗಾದಿಯನ್ನು ತಿಳಿದು ಸಾಧನೆಯ ಕಡೆಗೆ ಗಮನಹರಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಡಾ. ನಾರಾಯಣ ಅಕ್ಕಸಾಲಿ, ಉಪನ್ಯಾಸಕ ಮೃತ್ಯುಂಜಯ ಮಠ, ಡಾ. ಹನುಮಂತ ಹೂಗಾರ್, ಡಾ ವಿಶ್ವನಾಥ್ ಹಿರೇಮಠ್, ವಾಯ್ ಆರ್ ಮೂಲಿಮನಿ, ಎಫ್ ಬಿ ಅಂಗಡಿ, ವಿಎಂ ಪಟ್ಟದಕಲ್, ಕಾಲೇಜಿನ ಜಿ ಎಸ್ ಶೃತಿ ಪವನ್, ಸಂಜೆ ಅಕ್ಕಸಾಲಿ ಉಪಸ್ಕರ್