ಮೈಸೂರು: ಲೋಕಸಭೆ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಕೆಂಡಗಣ್ಣ ವಿಶ್ವಕರ್ಮ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ವಿಶ್ವಕರ್ಮ ನಿಗಮ ಸ್ಥಾಪನೆ, ಜಯಂತಿ ಆಚರಣೆ ಮೂಲಕ ಸಿದ್ದರಾಮಯ್ಯ ಅವರು ಸಮುದಾಯದ ಅಸ್ಮಿತೆಗೆ ಬಲ ತುಂಬಿದ್ದಾರೆ. ಬಿಜೆಪಿಯಿಂದ ಯಾವುದೇ ಲಾಭವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ನಮ್ಮವರ ಕಷ್ಟ ಆಲಿಸಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖಂಡರಾದ ಜಯಲಕ್ಷ್ಮೀ ಮಹದೇವರಾಜು, ಲಕ್ಷ್ಮಿ, ಕೆ.ಎನ್.ಕುಮಾರ್, ವೈ.ಎಸ್.ನಾರಾಯಣ್ ಕುಮಾರ್, ಸರಸ್ವತಿ ರವಿಕುಮಾರ್, ಎನ್.ನಟರಾಜ್, ಮಂಜು ಇದ್ದರು.