ಜಿಲ್ಲೆ

ಮೇ 17,18ಕ್ಕೆ ಪೂರ್ಣಪ್ರಜ್ಞಕಾಲೇಜಿನಲ್ಲಿ ಪ್ರಜ್ಞಾ ಫೆಸ್ಟ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೇ 17 ಹಾಗೂ 18 ರಂದು ರಾಜ್ಯಮಟ್ಟದ "ಪ್ರಜ್ಞಾ ಫೆಸ್ಟ್​" ಆಯೋಜಿಸಲಾಗಿದೆ.
ಮೇ 17ರಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪೂರ್ಣಪ್ರಜ್ಞ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಶ್ರೀರಮಣ ಐತಾಳ್​ ಮುಖ್ಯ ಅತಿಥಿಯಾಗಿರುವರು. ಕಾಲೇಜಿನ ಮುಖ್ಯ ಕಾರ್ಯದರ್ಶಿ ಡಾ.ಜಿ.ಎಸ್​.ಚಂದ್ರಶೇಖರ್​ ಉಪಸ್ಥಿತರಿರುತ್ತಾರೆ. ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.