ಜಿಲ್ಲೆ

ಪಿಪಿಸಿಯಲ್ಲಿ ಆಹಾರ ಮೇಳ ಉದ್ಘಾಟನೆ

ಉಡುಪಿ: ಭಾರತೀಯ ಆಹಾರ ಪದ್ಧತಿಯಲ್ಲಿರುಷ್ಟು ವೈವಿಧ್ಯತೆ, ಔಷಧೀಯ ಗುಣ ಬೇರೆ ಯಾವ ಪದಾರ್ಥಗಳಲ್ಲಿಯೂ ಇಲ್ಲ. ಭಾರತೀಯ ಆಹಾರ ಪರಂಪರೆ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಅದಮಾರು ಮಠ ಎಜುಕೇಶನ್​ ಕೌನ್ಸಿಲ್​ ಗೌರವ ಕೋಶಾಧಿಕಾರಿ ಸಿಎ ಕೃಷ್ಣ ಜಿ.ವಿ. ಹೇಳಿದರು.

ಶುಕ್ರವಾರ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವತಿಯಿಂದ ನಡೆದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವರ್ಧಿಸುವ ಸಾವಯವ ಉತ್ಪನ್ನಗಳ ಮಹತ್ವದ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ಇತ್ತೀಚೆಗೆ ಅನ್ವೇಷಣೆ ಮಾಡಿದ ಗೋಕೃಪಾಮೃತ ರಸಗೊಬ್ಬರದಿಂದ ಉತ್ತಮ ಸಲು ಪಡೆಯಬಹುದು. ರೈತರಿಗೆ ಇದನ್ನು ಉಚಿತವಾಗಿ ಹಂಚುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕೋಶಾಧಿಕಾರಿ ಸಿಎ ಪ್ರಶಾಂತ್​ ಹೊಳ್ಳ, ಉದ್ಯಮಿ ಹರೀಶ್​ ಕಿಣಿ, ಅದಮಾರು ಶ್ರೀಗಳ ಆಪ್ತ ಕಾರ್ಯದರ್ಶಿ ಗೋಪಾಲ್​ ಶಬರಾಯ, ಸಂಧ್ಯಾಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ ಉಪಸ್ಥಿತರಿದ್ದರು.