ಉಡುಪಿ: ರಾಷ್ಟ್ರದ ಸಾಂಸ್ಕತಿಕ ವಿಕಾಸಕ್ಕೆ ಜಗತ್ತಿನ ಮೊದಲ ಉದಾಹರಣೆ ಭಾರತ. ಪ್ರಾಚಿನ ಕಾಲದಿಂದಲೂ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿವಾಗಿದೆ. ಇದನ್ನೆಲ್ಲವನ್ನು ಅರಿತು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಸಂವೇದನಾ ಪೌಂಡೇಶನ್ ಸಂಚಾಲಕ ಪ್ರಕಾಶ್ ಮಲ್ಪೆ ಹೇಳಿದರು.
ಸೋಮವಾರ ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ್ ಮತ್ತು ಪೂರ್ಣಪ್ರಜ್ಞಾ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಎ.ವಿ ಹಾಲ್ನಲ್ಲಿ "ವಿಕಸಿತ ಭಾರತಕ್ಕಾಗಿ ಶಿಕ್ಷಕರ ಪಾತ್ರ"ದ ಕುರಿತ ಅಧ್ಯಾಪಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಸಮುದಾಯವನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ಶಿಕ್ಷಕರದ್ದಾಗಿದೆ. ಈ ಕಾರ್ಯ ಯಶಸ್ವಿಯಾದರೆ ವಿಕಸಿತ ಭಾರತ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಐ.ಕ್ಯೂ.ಎ.ಸಿ ಯ ಸಂಯೋಜಕ ಡಾ. ವಿನಯ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಕ್ಷಿಣ ಪ್ರಾಂತದ ಉಚ್ಛಶಿಕ್ಷಾ ಸಂಸ್ಥಾನದ ಸಂಯೋಜಕ ಡಾ. ಶಿವಾನಂದ ನಾಯಕ್ ಸ್ವಾಗತಿಸಿದರು. ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಸಂತೋಷ್ ಕುಮಾರ್ ವಂದಿಸಿದರು. ರಾಜಶಂಕರ್ ಕಾರ್ಯಕ್ರಮ ನಿರೂಪಿಸಿದರು.