ಜಿಲ್ಲೆ

ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ವೇದಿಕೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ರ್ನಿದಿಷ್ಟ ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಸಾಂಸತಿಕ ಉತ್ಸವ ಪ್ರಜ್ಞಾ ಸ್ಟ್​ ಆಯೋಜಿಸಲಾಗಿದೆ. ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಲಾದ 2 ದಿನಗಳ ರಾಜ್ಯ ಮಟ್ಟದ ಅಂತರ್​ ಕಾಲೇಜು ಪ್ರಜ್ಞಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆಯಾಗಬೇಕು ಎಂಬ ಉದ್ದೇಶದಿಂದ ವಿಬುಧೇಶ ತೀರ್ಥ 6 ದಶಕಗಳ ಹಿಂದೆ ಕಾಲೇಜು ಪ್ರಾರಂಭಿಸಿದ್ದರು. ಅವರ ಕನಸು ನಸಾಗಿಸಲು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ.ಜಿ. ಎಸ್​. ಚಂದ್ರಶೇಖರ್​, ಪಿಐಎಂ ನಿರ್ದೇಶಕ ಡಾ. ಪಿ.ಎಸ್​. ಐತಾಳ್​, ಪ್ರಾಂಶುಪಾಲರಾದ ಡಾ. ರಾಮು ಎಲ್​., ಮುಖ್ಯ ಸಂಯೋಜಕ ಡಾ ಟಿ. ಎಸ್​. ರಮೇಶ್​, ಡಾ. ವಿನಯಕುಮಾರ್​, ಮಂಜುನಾಥ ಕರಬ, ಅನಂದ ರಾಯಮನೆ, ಪ್ರತಿಭಾ ಎಸ್​ ಭಟ್​, ಪ್ರತಿಭಾ ಆಚಾರ್ಯ, ಡಾ. ಸಂತೋಷ್​ ಕುಮಾರ್​, ಸುಮಲತಾ, ಡಾ. ಜಯಲಕ್ಷಿ$್ಮ ಮೊದಲಾದವರು ಉಪಸ್ಥಿತರಿದ್ದರು. ಉತ್ಸವದಲ್ಲಿ ಶೈಕ್ಷಣಿಕ ವಿಭಾಗದಲ್ಲಿ 37 ಮತ್ತು ಸಾಂಸತಿಕ ವಿಭಾಗದಲ್ಲಿ 7 ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.