ಜಿಲ್ಲೆ

ಉಡುಪಿ ಸೀರೆ ಜಿಲ್ಲೆಗೆ ಗೌರವದ ಸಂಕೇತ: ಜಿಲ್ಲಾಧಿಕಾರಿ

ಉಡುಪಿ: ಜಿಐ ಟ್ಯಾಗ್​ ಹೊಂದಿರುವ ಉಡುಪಿ ಸೀರೆಗಳು ಜಿಲ್ಲೆಗೆ ಗೌರವದ ಸಂಕೇತವಾಗಿದ್ದು, ಅಪೂರ್ವ ಕಲೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಸೋಮವಾರ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆಶ್ರಯದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂದ ಬ್ಯಾಂಕಿಂಗ್​ ಸೇವೆ ಮತ್ತು ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಶಿಸಿ ಹೋಗುತ್ತಿರುವ ಕೈಮಗ್ಗದ ಸೀರೆಗಳ ಪುನಶ್ಚೇತನಕ್ಕೆ ಸಮುದಾಯ ಪಣತೊಟ್ಟಿದ್ದು, ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಈಗಾಗಲೇ ಗಣಿ ಇಲಾಖೆಯ ಡಿಎಂಎ್​ ನಿಧಿಯಿಂದ 15 ಲಕ್ಷ ರೂ. ಅನುದಾನದೊಂದಿಗೆ ಕೈಮಗ್ಗದ ಸೀರೆ ತಯಾರಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಖಾಸಗಿ ಕಂಪೆನಿಗಳ ಸಿಎಸ್​ಅರ್​ ನಿಧಿಯಿಂದ ಇನ್ನೊಂದು ಬ್ಯಾಚ್​ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ನೇಕಾರ ಭವನ ಮತ್ತು ಮಾರಾಟ ಮಳಿಗೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ. ಎಂ.ಎನ್​. ರಾಜೇಂದ್ರ ಕುಮಾರ್​, ಕೈಮಗ್ಗ ಸೀರೆಗಳಿಗೆ ಹಿಂದೆ ಇದ್ದ ಗೌರವ ಮತ್ತೆ ಮರುಕಳಿಸಬೇಕು. ಉಡುಪಿ ಸೀರೆ ಪುನಶ್ಚೇತನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಸೋಮಶೇಖರ್​ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​., ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಬಾರ್ಡ ಡಿಜಿಎಂ ಸಂಗೀತಾ ಕರ್ತಾ, ಅರ್ಥಿಕ ತಜ್ನ ಜಗದೀಶ್​ ಶೆಟ್ಟಿಗಾರ್​, ಜಿಲ್ಲಾ ಲಯನ್ಸ್​ ಗವರ್ನರ್​ ಡಾ. ನೇರಿ ಕರ್ನೇಲಿಯೋ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕಿ ಪೂರ್ಣಿಮಾ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೆಶಕ ಶಿವಶಂಕರ್​, ಸಹಕಾರ ಸಂಗಳ ಸಹಾಯಕ ನಿಬಂಧಕ ಎಸ್​.ವಿ. ಅರುಣ್​ ಕುಮಾರ್​, ಡಿಸಿಸಿ ಬ್ಯಾಂಕ್​ ನಿರ್ದೆಶಕರಾದ ಬೆಳಪು ದೇವಿಪ್ರಸಾದ್​ ಶೆಟ್ಟಿ, ರಾಜೇಶ್​ ರಾವ್​ ಪಾಂಗಾಳ, ಅಶೋಕ್​ ಕುಮಾರ್​ ಶೆಟ್ಟಿ ಉಪಸ್ಥಿತರಿದ್ದರು. ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್​ ಇಂದ್ರಾಣ ಸ್ವಾಗತಿಸಿ, ನಗರಸಬಾ ಸದಸ್ಯ ಮಂಜುನಾಥ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.