ಜಿಲ್ಲೆ

ವರ್ತಕರು, ಪಪಂ ಅಧಿಕಾರಿಗಳ ಸಭೆ

Mangaluru - Nishantha Narayana

ವಿಟ್ಲ: ವಾಣಿಜ್ಯ ಮತ್ತು ವರ್ತಕರ ಸಂಘದ ಸದಸ್ಯರ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಯಿತು.

ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ಮಾತನಾಡಿ, ವರ್ತಕರು ಪ್ಲಾಸ್ಟಿಕ್ ಬಳಕೆ ಮಾಡದೆ, ಬಟ್ಟೆ ಚೀಲಗಳನ್ನು ಮಾತ್ರ ಬಳಸಬೇಕು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದರು.

ವರ್ತಕರಿಗೆ ಉಚಿತವಾಗಿ ಬಟ್ಟೆಚೀಲ ವಿತರಿಸಲಾಯಿತು. ಪ್ಲಾಸ್ಟಿಕ್ ಬಳಕೆ ನಿಷೇಧ ನಿರ್ಣಯಕ್ಕೆ ವರ್ತಕರು ಬೆಂಬಲ ಸೂಚಿಸಿದರು.

ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ., ಗೌರವಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷ ವಿ.ಎಸ್.ಇಬ್ರಾಹಿಂ, ಕಾರ್ಯದರ್ಶಿ ಕ್ಲಿಫರ್ಡ್, ಕೋಶಾಽಕಾರಿ ಆಂಟನಿ ಲೊಬೋ, ಪ್ರಮುಖರಾದ ಸುಭಾಶ್ಚಂದ್ರ ನಾಯಕ್ ಉಪಸ್ಥಿತರಿದ್ದರು.