ಜಿಲ್ಲೆ

ನಿಸ್ವಾರ್ಥಿಗಳಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ - ವೀರಶೈವ ಮಹಾವಿದ್ಯಾಲಯದ ಗೋನಾಳ ರಾಜಶೇಖರಗೌಡ ಅಭಿಮತ

ಬಳ್ಳಾರಿ: ಸ್ವಾರ್ಥಿಗಳಿಂದ ಜಗತ್ತು ವಿನಾಶದ ಅಂಚಿಗೆ ತಲುಪುತ್ತಿದೆ. ನಿಸ್ವಾರ್ಥಿಗಳು ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಿಸಬಲ್ಲರು ಎಂದು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ ಹೇಳಿದರು.

ನಗರದ ವೀರಶೈವ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಬುಧವಾರ ಏರ್ಪಡಿಸಿದ್ದ ವಿವೇಕಾನಂದರ 158ನೇ ಜಯಂತಿ, ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ರಾಮಕೃಷ್ಣ ಆಶ್ರಮದ ಯುವ ಸಮಿತಿ ಸದಸ್ಯ ರಾಜಶೇಖರ ಮಾತನಾಡಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅನಾದಿಕಾಲದಿಂದ ಬೇರೂರಿದ್ದ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾನತೆ, ವೈಚಾರಿಕತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮಿಸಿದ್ದಾರೆ ಎಂದರು. ಪ್ರಾಚಾರ್ಯ ಡಾ.ಜಿ.ರಾಜಶೇಖರ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ಹಲಕುಂದಿ ಸತೀಶ್ ಕುಮಾರ್, ತಿಮ್ಮನಗೌಡ, ಜಗನ್ನಾಥ ಇತರರಿದ್ದರು.