ವಿಜಯಪುರ : ನವರಸಪುರ ಶಾಖಾ ವ್ಯಾಪ್ತಿಯಲ್ಲಿ ಎಚ್ಟಿ ವಾಹಕ ಬದಲಾವಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಸೆ. 15 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅಂದು ಸೇನಾ ನಗರ ಫೀಡರ್ನ ಮಾರ್ಗದಲ್ಲಿ ಬರುವ ಟ್ರೇಜರಿ ಕಾಲನಿ, ರಾಮದೇವ ನಗರ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಇಟಗಿ ಕಾಲನಿ, ವೇದಾಂತ ಹಾಸ್ಪಿಟಲ್, ನಿಂಬರಗಿ ಬಡಾವಣೆ, ಕುಲಕರ್ಣಿ ಲೇಔಟ್, ಖುರೇಷಿ ಕಾಲನಿ ಸಮೀಪದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.