ವಿಜಯವಾಣಿ ಸುದ್ದಿಜಾಲ ಧಾರವಾಡ
ಲಕಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ. 8ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಟೋಲ್ನಾಕಾ, ಮಾಳಮಡ್ಡಿ, ನಗರಕರ ಕಾಲನಿ, ಗಾಂಧಿನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಗಿರಿನಗರ, ಗುರುದೇವ ನಗರ, ವಿದ್ಯಾಗಿರಿ, ರಜತಗಿರಿ, ವೈ.ಎಸ್. ಕಾಲನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ಸ್ಟೇಶನ್ ರಸ್ತೆ, ನುಗ್ಗಿಕೇರಿ, ನವಲೂರ, ಜನ್ನತನಗರ, ಹೊಸಯಲ್ಲಾಪುರ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್, ಶಿವಾನಂದನಗರ, ರಾಮನಗರ, ಲೈನ್ ಬಜಾರ್, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರಸ್ತೆ, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ನಿಗದಿ, ದೇವರಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು, ವಿಠ್ಠಲ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.