ಬೆಟ್ಟದಪುರ: ಬೆಟ್ಟದಪುರ ಸೆಸ್ಕ್ ಉಪವಿಭಾಗದ ಕಣಗಾಲು ಶಾಖಾ ವ್ಯಾಪ್ತಿಯ ಚಪ್ಪರದಹಳ್ಳಿ ಫೀಡರ್‌ನಲ್ಲಿ ತುರ್ತು ಕಾಮಗಾರಿ ನಿಮಿತ್ತ ಡಿ.6ರಂದು ಕಣಗಾಲು, ಹಲಗನಹಳ್ಳಿ, ದೊಡ್ಡಕಮರವಳ್ಳಿ, ಚಪ್ಪರದಹಳ್ಳಿ ಮತ್ತು ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೃಷಿ ಪಂಪ್‌ಸೆಟ್ ಗ್ರಾಹಕರಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಎಇಇ ಲಕ್ಷ್ಮ್ಮೀಶ್ ಪ್ರಕಟಣೆಯಲ್ಲಿ ಕೊರಿದ್ದಾರೆ.