ವಿಜಯವಾಣಿ ಸುದ್ದಿಜಾಲ ಧಾರವಾಡ
ಶೇಡಬಾಳ ಖಾನಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ. 17ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ತುರ್ತುಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಗರಗ, ಹಂಗರಕಿ, ದುಬ್ಬದಮರಡಿ, ಅಗಸನಹಳ್ಳಿ, ಶೇಡಬಾಳಖಾನಾಪುರ, ತಡಕೋಡ, ಮಾದನಭಾವಿ, ಮುಗಳಿ, ಹೊಸಟ್ಟಿ, ಬೋಗೂರ, ಜಿರಗಿವಾಡ, ಕೊಟಬಾಗಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.