ಹೊಸಪೇಟೆ: ಜೆಸ್ಕಾಂ ಹೊಸಪೇಟೆ ಗ್ರಾಮೀಣ ಉಪವಿಭಾಗದ ೧೧೦/೧೧ ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಯಲ್ಲಿ ಗುರುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಟಿಎಸ್‌ಪಿ, ವ್ಯಾಸನಕೆರೆ, ರಾಯರಕೆರೆ, ಕಲ್ಲಹಳ್ಳಿ, ರಾಜಾಪುರ, ರಾಜಾಪುರ, ಕಾಕುಬಾಳು, ಕೊಟಗಿನಾಳು, ಗುಂಡ್ಲುವದ್ದಿಗೇರೆ, ವಡ್ರಹಳ್ಳಿ, ಜಿ.ಜಿ.ಕ್ಯಾಂಪ್ ಪ್ರದೇಶಗಳಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆ ವರೆಗೆ ಹಾಗೂ ಬಸವನದುರ್ಗ, ಬೆನಕಾಪುರ, ಬೆನಕಾಪುರ ತಾಂಡ, ನಾಗೇನಹಳ್ಳಿ, ಕಾಳಘಟ್ಟ, ೮೮ ಮುದ್ಲಾಪುರ, ನರಸಾಪುರ, ಇಪ್ಪತ್ತೇರಿ ಹಾಗೂ ಹೊಸೂರು ಪ್ರದೇಶಗಳಲ್ಲಿ ಮಧ್ಯಾಹ್ನ ೨ ರಿಂದ ಸಂಜೆ ೫ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಜೆಸ್ಕಾಂ ಗ್ರಾಹಕರು ಸಹಕರಿಸಬೇಕು ಎಂದು ಹೊಸಪೇಟೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.