ಧಾರವಾಡ: ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ. 16ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 3ನೇ ತ್ರೈ ಮಾಸಿಕ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಉದಯಗಿರಿ, ವನಸಿರಿನಗರ, ರಾಜಾಜಿನಗರ, ಸತ್ತೂರ, ಆಶ್ರಯ ಕಾಲನಿ, ನವಲೂರ, ಸಂಜೀವಿನಿ ಪಾರ್ಕ, ಕೆಎಂಎಫ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.