ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿಜಯನಗರ 4ನೇ ಹಂತ ವಿದ್ಯುತ್ ಮಾರ್ಗದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿದ್ಯುತ್ ಸುಧಾರಣಾ ಕಾಮಗಾರಿಯನ್ನು ಕೈಗೊಂಡಿರುವ ಕಾರಣ ಅ.19ರಂದು ನಗರದ ಕೆಲ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತೇಜು ಕಾರ್ನರ್ ಸುತ್ತಮುತ್ತ, 80 ಅಡಿ ರಸ್ತೆ, ಮೈಲಾರಿ ಹೋಟೆಲ್, ಮರಿಮಲ್ಲಪ್ಪ ಶಾಲೆ ಸುತ್ತಮುತ್ತ, ವಿಜಯನಗರ ಬಸ್ ಡಿಪೋ, ಚಾಮುಂಡೇಶ್ವರಿ ಸರ್ಕಲ್, ಹೈಟೆನ್ಷನ್ ಲೈನ್, ಸಂಕಲ್ಪ ಅಪಾರ್ಟ್ಮೆಂಟ್ ಹಿಂಭಾಗ, ಅಂಚೆ ಕಚೇರಿ ರಸ್ತೆ ಸುತ್ತಮುತ್ತ, ಬಿಎಸ್‌ಎನ್‌ಎಲ್ ಟವರ್ ಹಿಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.