ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ 33/11 ಕೆ.ವಿ. ನಿಗದಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 14ರಂದು 4ನೇ ತ್ರೈಮಾಸಿಕ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ 11 ಕೆವಿ ಮಾರ್ಗಗಳಾದ ಟಿ.ಆರ್. ನಗರ, ಅಂಬ್ಲಿಕೊಪ್ಪ, ಬಣದೂರ, ಹಳ್ಳಿಗೇರಿ, ಬೆಳ್ಳಿಗಟ್ಟಿ, ದೇವರಹುಬ್ಬಳ್ಳಿ, ಕಲಕೇರಿ, ಮಲ್ಲೂರ, ನಿಗದಿ, ಮನಗುಂಡಿ ಮಾರ್ಗಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.