ಹುಬ್ಬಳ್ಳಿ : ಇಲ್ಲಿನ ಅಕ್ಷಯ ಕಾಲನಿಯ ವಿದ್ಯುತ್ ಉಪ ಕೇಂದ್ರದಲ್ಲಿ 3ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ನ. 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಕ್ಷ್ಮೀ ನಾರಯಣ ನಗರ, ಲಿಡಕರ ಕಾಲನಿ, ಶಿರೂರು ಪಾರ್ಕ್, ಪ್ರಗತಿ ಕಾಲನಿ, ವಿದ್ಯಾನಗರ, ಜಯ ನಗರ, ತಿಮ್ಮಸಾಗರ ಗುಡಿ, ಅಕ್ಷಯ ಕಾಲನಿ, ತೋಳನ ಕೇರೆ, ರಾಮಕೃಷ್ಣ ನಗರ, ನಿಸರ್ಗ ನಗರ, ಬಸವೇಶ್ವರ ನಗರ, ರಾಮಲಿಂಗೇಶ್ವರ ನಗರ, ಗಾಂಧಿ ನಗರ, ರವಿ ನಗರ, ಮಂಜುನಾಥ್ ನಗರ ಕ್ರಾಸ್, ಅಕ್ಷಯ ಪಾರ್ಕ್, ರೈಲ್ ನಗರ, ಸೂರಿ ನಗರ, ಲಿಂಗರಾಜ ನಗರ, ಕಾಳಿದಾಸ ನಗರ, ಬಿ.ವಿ.ಬಿ ಕಾಲೇಜ್, ನೇಕಾರ ಭವನ, ಪರಿವರ್ತನ ಗುರುಕುಲ ಶಾಲೆ, ಆಶಾನಗರಿ ಲೇ-ಔಟ್, ನಿವೇದಿತಾ ಲೇ-ಔಟ್ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.