ಜಿಲ್ಲೆ

ವಿದ್ಯುತ್​ ವ್ಯತ್ಯಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ದಾಸ್ತಿಕೊಪ್ಪ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ನ. 21ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತದಿಂದ ತ್ರೈ ಮಾಸಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ದಾಸ್ತಿಕೊಪ್ಪ, ಕಲಘಟಗಿ, ಹಿರೇಹೊನ್ನಳ್ಳಿ, ಹುಲ್ಲಂಬಿ, ಬಿಸರಳ್ಳಿ, ಗಳಗಿನಗಟ್ಟಿ, ಕಾಮಧೇನು, ರಾಮನಾಳ, ಹರೋಗೇರಿ, ಮಡಕಿಹೊನ್ನಳ್ಳಿ, ಬಗಡಗೇರಿ, ಹಿಂಡಸಗೇರಿ, ಮಲಕನಕೊಪ್ಪ, ಜಿನ್ನೂರ್​, ಹುಣಸಿಕಟ್ಟಿ, ಬಿದರಗಡ್ಡಿ, ಬೆಲವಂತರ, ಶಿವನಾಪುರ, ಹನಮಾಪುರ, ಮುಕ್ಕಲ, ಬಮ್ಮಿಗಟ್ಟಿ, ಆಲದಕಟ್ಟಿ, ತಾವರಗೇರಿ, ಅರಳಿಹೊಂಡ, ನೆಲ್ಲಿಹರವಿ, ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.