ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ಮಂಗಳವಾರ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು. ವಿರೂಪಾಕ್ಷ ಮಹಾಸ್ವಾಮಿಗಳು, ಕೆಂಚಪ್ಪ ಪೂಜಾರಿ, ಎಂ.ಆರ್. ಪಾಟೀಲ, ಕಲ್ಲನಗೌಡ ಬಿರಾದಾರ ಇತರರಿದ್ದರು. 
ಜಿಲ್ಲೆ

ಅಧಿಕಾರ ಶಾಶ್ವತ ಅಲ್ಲ, ನಾವು ಮಾಡಿದ ಕೆಲಸಗಳೇ ಅಜರಾಮರ

ಇಂಡಿ: ಜೀವನದಲ್ಲಿ ಅಧಿಕಾರ, ಅಂತಸ್ತು ಶಾಶ್ವತವಲ್ಲ. ಅಧಿಕಾರದಲ್ಲಿರುವವರೆಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಅವರ ಪ್ರೀತಿ, ವಿಶ್ವಾಸ ಗಳಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಪಡನೂರ ಗ್ರಾಮದಲ್ಲಿ ಮಂಗಳವಾರ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಡನೂರ ಗ್ರಾಮ ನನ್ನನ್ನು ಬೆಳೆಸಿದೆ. ನನ್ನ ಮತಕ್ಷೇತ್ರದ ಜನ ಹೃದಯವಂತರು. ಇಂತವರನ್ನು ಜೀವನದ ಉಸಿರು ಇರುವವರೆಗೂ ಮರೆಯುವುದಿಲ್ಲ ಎಂದರು.

ಧೂಳಖೇಡ-ಮರಗೂರ ಗ್ರಾಮಗಳ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಸಾರ್ವಜನಿಕವಾಗಿ ಸಂಕಷ್ಟದಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಲಾಗಿದ್ದು, ಅದಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಶ್ರಮಿಸಿದ್ದೇನೆ. ಪಟ್ಟಣಕ್ಕೆ ಭೀಮಾ ನದಿಯಿಂದ 100 ಕೋಟಿ ರೂ. ವೆಚ್ಚದಲ್ಲಿ 24*7 ನೀರು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೃಷ್ಣಾ ನದಿಯಿಂದ ಒಂದೇ ನಲ್ಲಿ ಎರಡು ಟ್ಯಾಪ್ ಮಾಡಿ ಭೀಮಾ-ಕೃಷ್ಣಾ ನೀರು ಒದಗಿಸಲಾಗುವುದೆಂದು ತಿಳಿಸಿದರು.

ತಾಲೂಕಿನಲ್ಲಿನ ರಸ್ತೆಗಳು ಸಧಾರಣೆ ಆಗಿಲ್ಲ. ಲೋಕೋಯೋಗಿ ಇಲಾಖೆ ಸಚಿವರು ನನ್ನ ಮತಕ್ಷೇತ್ರಕ್ಕೆ ರಸ್ತೆಗಳ ಸುಧಾರಣೆಗೆ ವಿಶೇಷ ಅನುದಾನ ನೀಡಿದ್ದಾರೆ. ಅದರಲ್ಲಿ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರಲ್ಲದೆ, ಪಡನೂರ ಬಳಿಯ ಭೀಮಾನದಿಗೆ ಬ್ರೀಜ್, ರಸ್ತೆಗಳ ಸುಧಾರಣೆ, ದೇವಾಲಯಗಳ ಜೀಣೋದ್ಧಾರ ಕೆಲಸಗಳನ್ನು ಕೈಗೊಳ್ಳುತ್ತಿರುವುದಾಗಿಯೂ ಹೇಳಿದರು.

ವಿರೂಪಾಕ್ಷ ಮಹಾಸ್ವಾಮಿಗಳು ಮತ್ತು ಕೆಂಚಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.

ಎಂ.ಆರ್. ಪಾಟೀಲ, ಕಲ್ಲನಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ, ಜಟ್ಟೆಪ್ಪ ರವುಳಿ, ಜೀತಪ್ಪ ಕಲ್ಯಾಣಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ವಿಶ್ರಾಂತ ಡಿವೈಎಸ್ಪಿ ಸರನಾಡಗೌಡ, ಮುಸ್ತಾಕ್ ಇಂಡಿಕರ್, ಚಂದುಸಾಹುಕಾರ ಶಿರಗೂರ, ಜಾವೇದ್ ಮೋಮಿನ್, ಶಿವಯೋಗೆಪ್ಪ ಜೋತಗೊಂಡ, ಜಂಗಲಿಸಾಹುಕಾರ, ಬಸಪ್ಪಗೌಡ್ರು, ರುದ್ರಗೌಡ ಅಲಗೊಂಡ, ವಿಠ್ಠಲಗೌಡ ಪಾಟೀಲ ಅಗರಖೇಡ, ತಾಲೂಕು ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಗುತ್ತಿಗೆದಾರ ಎಲ್.ಎಂ. ಮಡಗೊಂಡ ಇದ್ದರು.