ಜಿಲ್ಲೆ

ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

ಕೊಳ್ಳೇಗಾಲ: ಕೊಳ್ಳೇಗಾಲ 66/11 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮಾ.2 ರಂದು ಬೆಳಗ್ಗೆ 10 ರಿಂದ 6 ಗಂಟೆ ಯವರೆಗೆ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಅಂದು 66/11 ಕೆ.ವಿ ವಿ.ವಿ. ಕೇಂದ್ರ ಕೊಳ್ಳೇಗಾಲ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11ಕೆವಿ ಫೀಡರ್‌ಗಳಾದ ದಾಸನಪುರ ವಾಟರ್ ಸಪ್ಲೈ, ಮುಳ್ಳೂರು, ಐ.ಪಿ(ಕಟ್ನವಾಡಿ), ಕುಣಗಳ್ಳಿ ಐ.ಪಿ. ಉತ್ತಂಬಳ್ಳಿ ಎನ್.ಜೆ.ವೈ, ಹರಳೆ ಐಪಿ, ಮುಡಿಗುಂಡ, ಶುಗರ್ ಫ್ಯಾಕ್ಟರಿ ಮತ್ತು ಕೊಳ್ಳೇಗಾಲ ಟೌನ್ -2, ಕೊಳ್ಳೇಗಾಲ ಟೌನ್-1 ಫೀಡರ್ ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ, ಕೊಳ್ಳೇಗಾಲ ಪಟ್ಟಣದ ಭೀಮನಗರ, ಆನಂದಜ್ಯೋತಿ ಕಾಲನಿ, ಆಶ್ರಯ ಬಡಾ ವಣೆ, ಸಿದ್ದಯ್ಯನಪುರ, ಬಸ್ತಿಪುರ, ಬೆಂಡ್ರಳ್ಳಿ- ಬೂದಿತಿಟ್ಟು, ಮುಡಿಗುಂಡ, ಶಂಕನಪುರ, ಬಾಪು ನಗರ, ದೇವಾಂಗಪೇಟೆ, ಕೊಳ್ಳೇಗಾಲ ಮೋಳೆ, ದಾಸನಪುರ, ಹರಳೆ, ಹಳೇ ಅಣಗಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎಇಇ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.