ಜಿಲ್ಲೆ

ವಿದ್ಯುತ ವ್ಯತ್ಯಯ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಲಕಮ್ಮನಹಳ್ಳಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಡಿ. 22ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತದಿಂದ ತರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ನಗರದ ಟೋಲ್​ನಾಕಾ, ಮಾಳಮಡ್ಡಿ, ನಗರಕರ ಕಾಲನಿ, ಗಾಂಧಿನಗರ, ಸರಸ್ವತಿನಗರ, ತೇಜಸ್ವಿನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ, ಗೋಪಾಲಪುರ, ಸನ್ಮತಿ ಮಾರ್ಗ, ಸ್ಟೇಶನ್​ ರಸ್ತೆ, ನುಗ್ಗಿಕೇರಿ, ವಿವೇಕಾನಂದನಗರ, ಸೋಮೇಶ್ವರ, ಮಾದರಮಡ್ಡಿ, ನವಲೂರ, ಜನ್ನತನಗರ, ಹೊಸಯಲ್ಲಾಪುರ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್​, ಶಿವಾನಂದ ನಗರ, ರಾಮನಗರ, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರಸ್ತೆ, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪ, ದೊಂಗಡಿಕೊಪ್ಪ, ನಿಗದಿ, ದೇವರಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು, ಮನಗುಂಡಿ, ರಾಯಾಪುರ, ವಿಠ್ಠಲ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.