ಜಿಲ್ಲೆ

ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ನಾಗೇಶ ಎಸ್

ಹನೂರು: ಸೆಸ್ಕ್ ಹನೂರು ಉಪ ವಿಭಾಗದ ಮಲೆಮಹದೇಶ್ವರ ಬೆಟ್ಟ ಶಾಖಾ ವ್ಯಾಪ್ತಿಯಲ್ಲಿ ಫೆ.13 ಮತ್ತು 14 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತಯವಾಗಲಿದೆ.

ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಹಾಗೂ ಜಂಗಲ್ ಕಟಿಂಗ್ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಕೌದಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಮಲೆಮಹದೇಶ್ವರ ಬೆಟ್ಟ, ಬಿದರಹಳ್ಳಿ ಫೀಡರ್ ವ್ಯಾಪ್ತಿಯ ಗ್ರಾಮಗಳಾದ ಮ.ಬೆಟ್ಟ, ವಡಕೆಹಳ್ಳ, ಪೊನ್ನಾಚಿ, ಗೋಪಿನಾಥಂ ಹಾಗೂ ಈ ಭಾಗದ ಇನ್ನಿತರೆ ಗ್ರಾಮಗಳಲ್ಲಿ ಈ 2 ದಿನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಆದ್ದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಎಇಇ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.