ಹುಬ್ಬಳ್ಳಿ : ಇಲ್ಲಿನ ತಾರಿಹಾಳ ಮತ್ತು ಕೆಐಎಡಿಬಿ ಗಾಮನಗಟ್ಟಿಯ ವಿದ್ಯುತ್ ಉಪ ಕೇಂದ್ರದಲ್ಲಿ ಜೂ. 30ರಂದು 4ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್-1 ಮತ್ತು 2, ತಾರಿಹಾಳ ಗ್ರಾಮ, ಕೆಐಎಡಿಬಿ ಸ್ಟೇಜ್-1 ಮತ್ತು 2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್ಎಸ್ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್ನ ಫೈಜರ್ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್, ಸಮರ್ಥ ಕಾಲೇಜ್, ಬೃಂದಾವನ ಲೇ-ಔಟ್, ಶ್ರೇಯಾ ಕಲ್ಲೂರ ಪ್ರಭಾತ ಕಾಲನಿ, ವಿದ್ಯಾನಗರ, ಜಯನಗರ, ತಿಮ್ಮ ಸಾಗರ ಗುಡಿ, ಕಲ್ಕಿ ನಗರ, ಜಗದೀಶ ನಗರ, ಬಂಜಾರ ಕಾಲನಿ, ಗೋಕುಲ ಗ್ರಾಮ, ಏರ್ಪೋರ್ಟ್, ರಾಧಾಕೃಷ್ಣ ನಗರ, ದೇವಿ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್ಲ, ಬದಾಮಿ ಓಣಿ, ಕಲ್ಯಾಣ ನಗರ, ಲಿಂಗರಾಜ ನಗರ, ಅತ್ತಿಗೇರಿ ಲೇ-ಔಟ್, ಗಣೇಶ ಕಾಲನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.