ಜಿಲ್ಲೆ

ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಅ.14 ರಂದು ವಿದ್ಯುತ್ ಕಡಿತ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಬರಡನಪುರ, ಗೋಪಾಲಪುರ, ಬೃಂದಾವನ, ಆನಂದೂರು ಮತ್ತು ಕೆ.ವಿಜಯನಗರ 11 ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕೆಲಸದ ನಿಮಿತ್ತ ಅ.14 ರಂದು ನಗರ ಹಾಗೂ ಗ್ರಾಮಾಂತರ ಭಾಗದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬರಡನಪುರ, ಮಾವಿನಹಳ್ಳಿ, ಗೋಪಾಲ್‌ಪುರ, ಮುಳ್ಳೂರು,ದಾರಿಪುರ ಭಾಗಶಃ, ರಾಯಲ್‌ಇನ್ ಸರ್ಕಲ್, ಜಯದೇವನಗರ, ಭೈರವೇಶ್ವರನಗರ, ಲೋಕನಾಯಕನಗರ, ಆದಿತ್ಯ ಹೋಟೆಲ್ ಹಿಂಭಾಗ, ಸಂಜೀವಿನಿ ಸರ್ಕಲ್, ಮೇಟಗಳ್ಳಿ ಗ್ರಾಮ, ಮಥುರನಗರ, ಜಯನಗರ 1ನೇ ಕ್ರಾಸ್‌ನಿಂದ 20ನೇ ಕ್ರಾಸ್‌ವರೆಗೆ, ಆನಂದೂರು, ಚಿಕ್ಕನಹಳ್ಳಿ, ಯಡ್ಡಹಳ್ಳಿ ಭಾಗಶಃ, ಕಲ್ಲೂರು, ಜಯನಗರ ಕೆ ಬ್ಲಾಕ್, ಚೆನ್ನಗಿರಿಕೊಪ್ಪಲು, ಚಿಕ್ಕಹರದನಹಳ್ಳಿ, ಶಿವರಾಂ ಬಡಾವಣೆ, ಶ್ರೀರಾಂಪುರ 2ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.