ಮೈಸೂರು: ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮೇಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಅ.8 ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಹೆಬ್ಬಾಳ್,ಕುಂಬಾರಕೊಪ್ಪಲು, ಟೋಲ್‌ಗೇಟ್, ವಾಣಿವಿಲಾಸ ಬಡಾವಣೆ, ಮಹದೇಶ್ವರ ಬಡಾವಣೆ, ಸುಭಾಷ್ ನಗರ, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಬಡಾವಣೆ, ಅಭಿಷೇಕ್ ವೃತ್ತ, ಮಾದೇಗೌಡ ವೃತ್ತ, ಎಂ.ಜಿ.ಕೊಪ್ಪಲು, ಹೊರವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, ಅರ್ಕಿಯಾಲಜಿ ಕಚೇರಿ, ಕೆಐಎಡಿಬಿ ಕೈಗಾರಿಕಾ ಬಡಾವಣೆ, ಎಲ್ ಆ್ಯಂಡ್ ಟಿ ಕಾರ್ಖಾನೆ, ರಾಣೆ ಮದ್ರಾಸ್, ಜೆ.ಕೆಟೈರ್ಸ್, ಮೈಸೂರು ಸ್ಟೀಲ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮೇಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಹೆಬ್ಬಾಳ್ ಕೈಗಾರಿಕ ಪ್ರದೇಶ, ಮೇಟಗಳ್ಳಿ, ಬೃಂದಾವನ ಬಡಾವಣೆ, ಲೋಕನಾಯಕ ನಗರ, ಜಯದೇವನಗರ, ಬಿಎಂಶ್ರೀ ನಗರ, ಹೆಬ್ಬಾಳ್ ಹೊರವರ್ತುಲ ರಸ್ತೆ, ಎಚ್‌ಪಿಸಿಎಲ್ ಗ್ಯಾಸ್ ಘಟಕ, ಹೆಬ್ಬಾಳ್ 1ನೇ, 2ನೇ ಹಾಗೂ 3ನೇ ಹಂತ, ಸುಬ್ರಹ್ಮಣ್ಯನಗರ, ಬಸವನಗುಡಿ, ಎಸ್‌ಬಿಎಂ ಬ್ಯಾಂಕ್ ಸುತ್ತ ಮುತ್ತ, ಹೆಬ್ಬಾಳ್ ಕಾಲೋನಿ, ಹೆಬ್ಬಾಳ್ ಮುಖ್ಯರಸ್ತೆ, ಲಕ್ಷ್ಮೀಕಾಂತನಗರ, ಸಂಕ್ರಾಂತಿ ವೃತ್ತ, ಗೋಲ್ಡನ್ ಬೇಕರಿ, ಕೆಐಎಡಿಬಿ ಬಡಾವಣೆ, ಮಯೂರ ವೃತ್ತ, ಕಾವೇರಿ ವೃತ್ತ, ಮಿಲಿಟರಿಕ್ವಾಟ್ರಸ್, ಆರ್‌ಬಿಐ, ವಿಕ್ರಾಂತ್ ಮುಖ್ಯ ಘಟಕ, ಶಿವಮೊಗ್ಗ ಸ್ಟೀಲ್ಸ್, ಬೆಳಗೊಳ ಕೈಗಾರಿಕ ಪ್ರದೇಶ, ಕೆಆರ್‌ಎಸ್ ರಸ್ತೆ, ಭೈರವೇಶ್ವರನಗರ, ಬಸವೇಶ್ವರನಗರ, ಮೇಟಗಳ್ಳಿ ಕೈಗಾರಿಕ ಪ್ರದೇಶ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.