ಜಿಲ್ಲೆ

ವಿದ್ಯುತ್ ವ್ಯತ್ಯಯ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಗದಗ ರಸ್ತೆಯ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 3ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಜ. 4ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಗದಗ ರಸ್ತೆ, ರೈಲ್ವೆ ವರ್ಕ್​ಶಾಪ್, ವಿನೋಭಾ ನಗರ, ರೈಲ್ವೆ ಕಾಲನಿ, ಸರಸ್ವತಿಪುರಂ, ಕುಸುಗಲ್ ರಸ್ತೆ, ಶಿರಗುಪ್ಪಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಆರ್.ಸಿ ಕಾಲನಿ, ಚೇತನಾ ಕಾಲನಿ, ಗಾಂಧಿವಾಡ ಕನ್ಯಾನಗರ, ವಿನೂತನ ಕಾಲೋನಿ, ಬೃಂದಾವನ ಕಾಲನಿ, ಕಿರೆಸೂರ ಕುಡಿಯುವ ನೀರು ಸರಬರಾಜು ಸ್ಥಾವರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.